obtrude ಅಬ್‍ಟ್ರೂಡ್‍
ಸಕರ್ಮಕ ಕ್ರಿಯಾಪದ
  1. ನಡುವೆ ತಲೆ ಹಾಕಿಕೊಂಡು ಬರು; ನಡುವೆ ತಲೆ, ಮೂಗು ತೂರಿಸು, ಹಾಕು.
  2. (ಒಬ್ಬನ ಮೇಲೆ, ಒಬ್ಬನ ಗಮನ ಸೆಳೆಯುವಂತೆ) ಮುನ್ನುಗ್ಗಿ ಬರು; ಮೇಲ್ವಾಯ್ದ ಬರು; ಬಲವಂತದಿಂದ ನುಗ್ಗು.
  3. (ತನ್ನ ಅಭಿಪ್ರಾಯ ಮೊದಲಾದವನ್ನು ಇನ್ನೊಬ್ಬನ ಮೇಲೆ) ಹೇರು; ಹೊರಿಸು.
  4. ಮುಂಚಾಚು, ಕಣ್ಣಿಗೆ ಬೀಳುವಂತೆ–ಮುಂದೂಡು ಮುಂದಕ್ಕೆ ತಳ್ಳು: the snail obtruded his tentacle ಬಸವನ ಹುಳು ತನ್ನ ತಂತುವನ್ನು ಕಣ್ಣಿಗೆ ಬೀಳುವಂತೆ ಮುಂಚಾಚಿತು.
ಅಕರ್ಮಕ ಕ್ರಿಯಾಪದ
  1. ಮುನ್ನುಗ್ಗು; ಮುನ್ನುಗ್ಗಿ ಬರು.
  2. (ನಡುವೆ) ತಲೆಹಾಕಿಕೊಂಡು ಬರು.