obstruction ಅಬ್‍ಸ್ಟ್ರಕ್‍ಷ(ಷ್‍)ನ್‍
ನಾಮವಾಚಕ
  1. ತಡೆಯುವಿಕೆ; ತಡೆಯೊಡ್ಡುವಿಕೆ; ಅಡ್ಡಗಟ್ಟುವಿಕೆ; ಪ್ರತಿರೋಧ; ಅಡಚಣೆಗಳನ್ನು ಒಡ್ಡುವಿಕೆ.
  2. ದುರ್ಗಮಗೊಳಿಸುವಿಕೆ; ಹಾದುಹೋಗಲು ಕಷ್ಟವಾಗುವಂತೆ ಮಾಡುವುದು.
  3. ಅಡ್ಡಿ; ತಡೆ; ಅಡಚಣೆ; ತಡೆಗಟ್ಟು; ಎಡರು; ಅಡ್ಡಗಟ್ಟು; ಪ್ರತಿಬಂಧ; ನಿರೋಧ; ಪ್ರತಿರೋಧ; ವಿಘ್ನ.
  4. ಪ್ರಗತಿ ನಿರೋಧ; (ಮುಖ್ಯವಾಗಿ ಪಾರ್ಲಿಮೆಂಟಿನ ವ್ಯವಹಾರಗಳ ವಿಷಯದಲ್ಲಿ) (ಬರಿಯ ಮಾತು ಮೊದಲಾದವುಗಳಿಂದ ಉದ್ದೇಶಪೂರ್ವಕವಾಗಿ ಕಾಲಹರಣ ಮಾಡಿ) ಪ್ರಗತಿಯನ್ನು–ನಿಲ್ಲಿಸುವುದು, ತಡೆಗಟ್ಟುವುದು, ಅಡ್ಡಿಪಡಿಸುವುದು; ಅಡ್ಡಿಮಾಡುವ ವಿಧಾನವನ್ನನುಸರಿಸುವುದು; ವಿಳಂಬ ನೀತಿಯನ್ನು ಯಾ ನಿರೋಧ ನೀತಿಯನ್ನು ಅನುಸರಿಸುವುದು.
  5. (ಕ್ರೀಡೆ) (ಕೆಲವು ಪಂದ್ಯಗಳಲ್ಲಿ ಕಾನೂನು ಬಾಹಿರ ವರ್ತನೆಯಾಗಿ ಇನ್ನೊಬ್ಬ ಆಟಗಾರನಿಗೆ) ತಡೆಯುಂಟುಮಾಡುವುದು; ಆಡಚಣೆ ಮಾಡುವುದು.
  6. (ವೈದ್ಯಶಾಸ್ತ್ರ) (ಮುಖ್ಯವಾಗಿ ಕರುಳಿನಲ್ಲಿ) ನಾಳ–ನಿರೋಧ, ಅಡಚಣೆ; ಶರೀರದ ನಾಳ ಮಾರ್ಗದಲ್ಲಿ ಉಂಟಾಗುವ ಅಡಚಣೆ.