obstruct ಅಬ್‍ಸ್ಟ್ರಕ್ಟ್‍
ಸಕರ್ಮಕ ಕ್ರಿಯಾಪದ
  1. ತಡೆ; ತಡೆಯೊಡ್ಡು; ಅಡ್ಡಗಟ್ಟು; ದುರ್ಗಮಗೊಳಿಸು; ಅಡಚಣೆಗಳನ್ನು ತಂದೊಡ್ಡು; ಹಾದುಹೋಗಲು ಕಷ್ಟವಾಗುವಂತೆ ಮಾಡು.
  2. (ಪ್ರಗತಿಗೆ) ಅಡ್ಡಿ ಮಾಡು; ಅಡ್ಡಿಪಡಿಸು; ತಡೆಯೊಡ್ಡು; (ಪ್ರಗತಿಯನ್ನು) ನಿಲ್ಲಿಸು; ತಡೆಗಟ್ಟು; ನಿರೋಧಿಸು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ ಬರಿಯ ಮಾತಿನಿಂದ ಕಾಲಹರಣ ಮಾಡಿ) ಅಡ್ಡಿಮಾಡುವ ವಿಧಾನವನ್ನು ಅನುಸರಿಸು; ನಿರೋಧ ನೀತಿಯನ್ನು ಅನುಸರಿಸು.