observer ಅಬ್‍ಸರ್ವರ್‍
ನಾಮವಾಚಕ
  1. (ನಿಸರ್ಗದ ವಿದ್ಯಮಾನಗಳು ಮೊದಲಾದವುಗಳ) ನೋಡುಗ; ದರ್ಶಿ; ವೀಕ್ಷಕ; ಪ್ರೇಕ್ಷಕ; ನೋಡುವವನು.
  2. ಆಸಕ್ತ–ವೀಕ್ಷಕ, ಪ್ರೇಕ್ಷಕ.
  3. ವೀಕ್ಷಕ; ಸಭೆ ಮೊದಲಾದವುಗಳ ಕಾರ್ಯಕಲಾಪಗಳಲ್ಲಿ ಭಾಗವಹಿಸದೆ, ಅವುಗಳ ಟಿಪ್ಪಣಿ ತೆಗೆದುಕೊಳ್ಳುವ, ಮಾಡಿಕೊಳ್ಳುವ ವ್ಯಕ್ತಿ.
  4. ವೀಕ್ಷಕ:
    1. ವಿಮಾನಗಳನ್ನು ನೋಡಿ ಅವುಗಳ ಗುರುತು ಹಿಡಿಯಲು ತರಪೇತಿ ಪಡೆದವ.
    2. ಶತ್ರುವಿನ ನೆಲೆ, ಸ್ಥಾನ, ಮೊದಲಾದವನ್ನು ಗುರುತಿಸಲು, ವಿಮಾನದಲ್ಲಿ ಕರೆದುಕೊಂಡು ಹೋಗುವಂಥ ವ್ಯಕ್ತಿ.
  5. (ನಿಯಮ, ತತ್ತ್ವ, ವ್ರತ, ಮತೀಯ ಕರ್ಮ, ಮೊದಲಾದವನ್ನು) ನಡೆಸುವವನು; ಆಚರಿಸುವವನು; ಪಾಲಿಸುವವನು; ಅನುಷ್ಠಾತೃ.
  6. (ಯಾವುದನ್ನೇ ಕುರಿತ) ಟೀಕಾಕಾರ; ಟೀಕೆಯ ರೂಪದಲ್ಲಿ ಅಭಿಪ್ರಾಯ ಹೇಳುವವನು.
  7. ವೃತ್ತಪತ್ರಿಕೆಯ ಹೆಸರಾಗಿ: The Observer.