observe ಅಬ್‍ಸರ್ವ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ವಸ್ತು ಮೊದಲಾದವನ್ನು) ಗಮನವಿಟ್ಟು ನೋಡು; ಲಕ್ಷಿಸು; ಗಮನಿಸು; ಗಮನಕ್ಕೆ ತಂದುಕೊ: the observed of all observers ಎಲ್ಲರ ಗಮನವೂ ಬೀಳುವಂಥ ವ್ಯಕ್ತಿ, ವಸ್ತು ಯಾ ವಿಷಯ; ಎಲ್ಲ ವೀಕ್ಷಕರಿಂದಲೂ ವೀಕ್ಷಿಸಲ್ಪಟ್ಟವನು ಯಾ ವೀಕ್ಷಿಸಲ್ಪಟ್ಟದ್ದು.
  2. ಎಚ್ಚರಿಕೆಯಿಂದ ಗಮನಿಸು, ನೋಡು.
  3. (ಶಾಸನ, ಕಟ್ಟಳೆ, ಕಾರ್ಯ ವಿಧಾನ, ತತ್ತ್ವ, ಮೊದಲಾದವನ್ನು) ನಡೆಸು; ಆಚರಿಸು; ಪಾಲಿಸು; ನಡೆಸಿಕೊಂಡು ಬರು; ಬಿಡದೆ ಅನುಸರಿಸು; ವಿಹಿತವಾಗಿ ನೆರೆವೇರಿಸು.
  4. (ನಿಯಮಿತ ಕಾಲ) ಪಾಲಿಸು; ಪಾಲನೆ ಮಾಡು.
  5. (ಮೌನ) ಆಚರಿಸು; ಪಾಲಿಸು.
  6. (ಮತೀಯ ಆಚರಣೆಯನ್ನು) ವಿಧಿವತ್ತಾಗಿ ಆಚರಿಸು; ಅನುಷ್ಠಾನಮಾಡು.
  7. (ವಾರ್ಷಿಕೋತ್ಸವವನ್ನು) ಆಚರಿಸು; ನಡೆಸು.
  8. ವೀಕ್ಷಿಸು; ಪ್ರಯೋಗದ ನೆರವಿಲ್ಲದೆ ನಿಸರ್ಗದ ವಿದ್ಯಮಾನಗಳನ್ನು ಪರಿಶೀಲಿಸಿ ಗುರುತು ಮಾಡಿಕೊ.
  9. (ಒಂದು ವಿಷಯವನ್ನು ಕುರಿತು) ಹೇಳು; ಅಭಿಪ್ರಾಯ ತಿಳಿಸು; ಮುಖ್ಯವಾಗಿ ಟೀಕಿಸು, ವಿಮರ್ಶಾತ್ಮಕ ಅಭಿಪ್ರಾಯ ಹೇಳು.
ಅಕರ್ಮಕ ಕ್ರಿಯಾಪದ
  1. (ವಿಷಯವನ್ನು ಕುರಿತು) ಟೀಕೆ ಮಾಡು; ಅಭಿಪ್ರಾಯ ನೀಡು.
  2. ಗಮನಿಸು; ಅವಲೋಕಿಸು.