observation ಆಬ್‍ಸರ್ವೇಷ(ಷ್‍)ನ್‍
ನಾಮವಾಚಕ
  1. ವೀಕ್ಷಣೆ; ಅವಲೋಕನ; ಗಮನವಿಟ್ಟು ನೋಡುವುದು ಯಾ ನೋಡಲ್ಪಡುವುದು.
  2. ವೀಕ್ಷಿತ ಸ್ಥಿತಿ; ಗಮನವಿಟ್ಟು ನೋಡಿದ ಸ್ಥಿತಿ.
  3. ಗಮನಿಸುವ ಶಕ್ತಿ; ಗಮನ ಕೊಟ್ಟು ನೋಡುವ ಸಾಮರ್ಥ್ಯ.
  4. (ಮುಖ್ಯವಾಗಿ ಟೀಕೆಯ ಯಾ ಟಿಪ್ಪಣಿಯ ರೂಪದ) ಹೇಳಿಕೆ; ಅಭಿಪ್ರಾಯ.
  5. ನಿಸರ್ಗ ವೀಕ್ಷಣೆ; ಪ್ರಕೃತಿ ವೀಕ್ಷಣೆ; ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳ ಕಾರ್ಯ ಕಾರಣಗಳು ಯಾ ಅವುಗಳ ಪರಸ್ಪರ ಸಂಬಂಧ ಮೊದಲಾದವನ್ನು ಕರಾರುವಾಕ್ಕಾಗಿ ನೋಡಿ ಗುರುತು ಮಾಡಿಕೊಳ್ಳುವುದು.
  6. ವೀಕ್ಷಣೆ; ಪರಿಶೀಲನೆ; ರೋಗಿಯ ಲಕ್ಷಣಗಳು, ಗುಮಾನಿಗೊಳಗಾದವನ ನಡೆ ನುಡಿ, ಮೊದಲಾದವನ್ನು ಗಮನಿಸುವುದು.
  7. ವೀಕ್ಷಣೆ; ಔನ್ನತ್ಯ ಮಾಪನ ಯಾ ಗಣನೆ; ಅಕ್ಷಾಂಶ, ರೇಖಾಂಶಗಳನ್ನು ಕಂಡುಹಿಡಿಯಲು ಸೂರ್ಯನ ಯಾ ಬೇರಾವುದೇ ಆಕಾಶಕಾಯದ ಔನ್ನತ್ಯವನ್ನು ಅಳೆಯುವುದು ಯಾ ಗಣಿಸುವುದು.
  8. (ಸೈನ್ಯ) (ಶತ್ರುಗಳ ದುರ್ಗ, ನೆಲೆ, ಚಲನವಲನ, ಮೊದಲಾದವುಗಳ) ವೀಕ್ಷಣೆ; ನಿರೀಕ್ಷಣೆ: army of observation (ಶತ್ರುಗಳ ದುರ್ಗ ಮೊದಲಾದವುಗಳ) ನಿರೀಕ್ಷಣಾ ಸೈನ್ಯ; ನಿರೀಕ್ಷಣಕ್ಕಾಗಿ ನಿಯುಕ್ತವಾದ, ನಿರೀಕ್ಷಣದಲ್ಲಿ ನಿರತವಾದ ಸೈನ್ಯ.
ಪದಗುಚ್ಛ
  1. attitude of observation ವೀಕ್ಷಣ ಭಂಗಿ; ವೀಕ್ಷಣಕ್ಕೆ ಅನುಕೂಲವಾದ ಭಂಗಿ.
  2. post of observation ವೀಕ್ಷಣ–ನೆಲೆ, ಸ್ಥಾನ, ಕೆಂದ್ರ; ಗಮನವಿಟ್ಟು ನೋಡಲು ಅನುಕೂಲವಾದ ನೆಲೆ.
  3. under observation ವೀಕ್ಷಣೆಯಲ್ಲಿ; ವೀಕ್ಷಣೆಗೊಳಪಟ್ಟು; ಪರಿಶೀಲನೆಯಲ್ಲಿ.