obscurity ಅಬ್ಸ್‍ಕ್ಯುಅರಿಟಿ
ನಾಮವಾಚಕ
(ಬಹುವಚನ obscuruties).
  1. ಮಬ್ಬು; ಮಸುಕು; ಕತ್ತಲೆ; ಬೆಳಕಿಲ್ಲದ ಸ್ಥಿತಿ; ಕತ್ತಲು ಕತ್ತಲಾಗಿರುವಿಕೆ; ಮಬ್ಬು ಮಬ್ಬಾದ ಸ್ಥಿತಿ; ಮಸುಕು ಮಸುಕಾಗಿರುವಿಕೆ.
  2. ಅಪ್ರಸಿದ್ಧ ಯಾ ಅಜ್ಞಾತ ವ್ಯಕ್ತಿ.
  3. ಅಪ್ರಸಿದ್ಧ ಯಾ ಅಜ್ಞಾತತೆ; ಯಾರ ಕಣ್ಣಿಗೂ ಬೀಳದಂತೆ, ಯಾರಿಗೂ ತಿಳಿಯದಂತೆ ಇರುವ ಸ್ಥಿತಿ.
  4. ಅಸ್ಪಷ್ಟತೆ; ಅಸ್ಫುಟತೆ; ಸಂದಿಗ್ಧತೆ; ಸ್ಪಷ್ಟವಾಗಿ ತಿಳಿಯದಂಥ ಸ್ಥಿತಿ ಯಾ ಲಕ್ಷಣ.
  5. ಅರ್ಥವಾಗದಂತಿರುವಿಕೆ; ದುರೂಹ್ಯತೆ; ದುರವಗಾಹ್ಯತೆ.
  6. ಅಸ್ಪಷ್ಟವಾದ ಅಂಶ, ಗ್ರಂಥ ಭಾಗ, ಮೊದಲಾದವು.