See also 2obscure
1obscure ಅಬ್ಸ್‍ಕ್ಯುಅರ್‍
ಗುಣವಾಚಕ
  1. ಸ್ಪಷ್ಟವಾಗಿ ಹೇಳಿಲ್ಲದ; ಅಸ್ಪಷ್ಟವಾಗಿ ಹೇಳಿರುವ.
  2. ಸುಲಭವಾಗಿ ಅರ್ಥವಾಗದ; ದುರ್ಗ್ರಾಹ್ಯ.
  3. ಅರ್ಥವಾಗದ; ವಿವರಿಸಿರದ; ವಿವರಣೆ ಮಾಡಿಲ್ಲದ; ಸಂದೇಹಾಸ್ಪದವಾದ; ಸಂದಿಗ್ಧವಾದ.
  4. ಬೆಳಕಿಲ್ಲದ; ಕತ್ತಲು ಕತ್ತಲಾದ; ಮಬ್ಬು ಮಬ್ಬಾದ; ಮಂಕಾದ; ಮಸುಕಾದ.
  5. ಅಸ್ಫುಟ; ಅಸ್ಪಷ್ಟ; ಸ್ಪಷ್ಟವಾಗಿಲ್ಲದ.
  6. ಮರೆಯಾದ; ಅಡಗಿದ; ಅಗೋಚರ; (ಕಣ್ಣಿಗೆ) ಕಾಣದಷ್ಟು ದೂರದಲ್ಲಿರುವ.
  7. ಕಣ್ಣಿಗೆ, ದೃಷ್ಟಿಗೆ–ಬಿದ್ದಿರದ; ಗಮನಕ್ಕೆ ಬಂದಿರದ.
  8. (ವ್ಯಕ್ತಿಯ ವಿಷಯದಲ್ಲಿ) ಸಾಮಾನ್ಯ; ಸಾಧಾರಣ; ಅವಿಖ್ಯಾತ; ಅಪ್ರಸಿದ್ಧ; ಪ್ರಸಿದ್ಧಿಗೆ, ಖ್ಯಾತಿಗೆ–ಬಂದಿಲ್ಲದ.
  9. (ಬಣ್ಣದ ವಿಷಯದಲ್ಲಿ) ಮಾಸಿದ; ಮಂಕಾದ; ಮಾಸಲು ಮಾಸಲಾದ.
ಪದಗುಚ್ಛ
  1. obscure rays ಅಸ್ಪಷ್ಟ ಕಿರಣಗಳು; ಸೌರವರ್ಣ ಪಟಲದ ಅಗೋಚರ, ಅದೃಶ್ಯ ಶಾಖ ಕಿರಣಗಳು.
  2. obscure vowel = indeterminate vowel.
See also 1obscure
2obscure ಅಬ್ಸ್‍ಕ್ಯುಅರ್‍
ಸಕರ್ಮಕ ಕ್ರಿಯಾಪದ
  1. ಮಬ್ಬುಗೊಳಿಸು; ಮಸುಕುಗೊಳಿಸು; ಮಂಕಾಗಿಸು; ಪ್ರಕಾಶಗುಂದಿಸು.
  2. ಅಸ್ಪಷ್ಟಗೊಳಿಸು; ಅರ್ಥವಾಗದಂತೆ ಮಾಡು; ಸಂದಿಗ್ಧವಾಗುವಂತೆ ಮಾಡು.
  3. (ಒಂದರ) ಕಳೆಗೆಡಿಸು; ಕಾಂತಿಗುಂದಿಸು.
  4. (ಒಬ್ಬನ) ಕೀರ್ತಿಯನ್ನು ಮಂಕಾಗಿಸು, ಮಸುಳಿಸು.
  5. (ಕಾಂತಿಯಲ್ಲಿ, ಕೀರ್ತಿಯಲ್ಲಿ) ಮೀರಿಸು; ಹಿನ್ನೆಲೆಗೆ ದೂಡು.
  6. (ಕಣ್ಣಿಗೆ ಕಾಣದಂತೆ) ಮರೆ ಮಾಡು.