See also 2oblique  3oblique
1oblique ಅಬ್‍ಲೀಕ್‍
ಗುಣವಾಚಕ
  1. ಓರೆಯಾದ; ಬಾಗಿದ; ಪ್ರವಣ:
    1. ಮೇಲಿನ ದಿಕ್ಕಿನಿಂದ ಯಾ ಸಮತಲದಿಂದ ಬಾಗಿದ .
    2. ನೇರವಾದ ಗೆರೆಯಿಂದ ಯಾ ಹಾದಿಯಿಂದ ಬೇರೆಯಾದ ದಿಕ್ಕು ಹಿಡಿದ.
  2. ಸುತ್ತು ಬಳಸಿನ; ಪರೋಕ್ಷ ವಿಧಾನದ; ಸುತ್ತಿಬಳಸಿ ಬರುವ; ನೇರವಾಗಿ ವಿಷಯಕ್ಕೆ ಹೋಗದ.
  3. (ಜ್ಯಾಮಿತಿ) ವಾಲಿದ; ಬಾಗಿದ; ಓರೆಯಾದ; ತಿರ್ಯಕ್‍:
    1. (ರೇಖೆ, ಸಮತಲ, ಮೊದಲಾದವುಗಳ ವಿಷಯದಲ್ಲಿ) ಸಮಕೋನದಲ್ಲಿಲ್ಲದ.
    2. (ಕೋನದ ವಿಷಯದಲ್ಲಿ) ಓರೆ(ಯಾದ); ಲಘು ಯಾ ವಿಶಾಲಕೋನದ.
    3. (ಶಂಕು, ಉರುಳೆ, ಮೊದಲಾದವುಗಳ ವಿಷಯದಲ್ಲಿ) ಆಧಾರತಲಕ್ಕೆ ಲಂಬವಾಗಿಲ್ಲದ ಅಕ್ಷವುಳ್ಳ.
  4. ವಾಲಿದ; ಬಾಗಿದ; ತಿರ್ಯಕ್‍:
    1. (ಅಂಗರಚನಾಶಾಸ್ತ್ರ) ದೇಹದ ಯಾ ಕೈಕಾಲುಗಳ ಅಕ್ಷಕ್ಕೆ ಸಮಾಂತರವಾಗಿಯಾಗಲಿ ಲಂಬವಾಗಿಯಾಗಲಿ ಇಲ್ಲದಿರುವ.
    2. (ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ) ಎರಡು ಪಕ್ಕಗಳೂ ಸಮವಾಗಿಲ್ಲದಿರುವ.
  5. (ವ್ಯಾಕರಣ) ಪ್ರಥಮಾ ಸಂಬೋಧನ ಭಿನ್ನ ವಿಭಕ್ತಿಯ; ಪ್ರಥಮಾ, ಸಂಬೋಧನ ವಿಭಕ್ತಿಗಳನ್ನು ಬಿಟ್ಟು ಉಳಿದ ವಿಭಕ್ತಿಗಳನ್ನು ಸೂಚಿಸುವ, ತೋರಿಸುವ.
ಪದಗುಚ್ಛ
  1. oblique case = 1oblique\((5)\).
  2. oblique narration ಪರೋಕ್ಷ ಕಥನ; ಸುತ್ತುಬಳಸಿನ ಕಥನ, ನಿರೂಪಣೆ.
See also 1oblique  3oblique
2oblique ಅಬ್‍ಲೀಕ್‍
ನಾಮವಾಚಕ
  1. ಓರೆಗೆರೆ $(/)$.
  2. ಓರೆ(ಯಾದ) ಸ್ನಾಯು.
See also 1oblique  2oblique
3oblique ಅಬ್‍ಲೀಕ್‍
ಅಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ obliques; ಭೂತರೂಪ ಮತ್ತು ಭೂತಕೃದಂತ

(ಮುಖ್ಯವಾಗಿ ಸೈನ್ಯದ ವಿಷಯದಲ್ಲಿ) (ನೇರವಾದ ಹಾದಿ ಬಿಟ್ಟು) ಓರೆಯಾದ ಯಾ ಬಳಸು ಹಾದಿಯಲ್ಲಿ ಮುಂದುವರಿ, ಸಾಗು.