oblige ಅಬ್ಲೈಜ್‍
ಸಕರ್ಮಕ ಕ್ರಿಯಾಪದ
  1. (ಹೇಳಿದಂತೆ ಮಾಡಲು) ಬಲಾತ್ಕರಿಸು; ನಿರ್ಭಂಧಪಡಿಸು; ಒತ್ತಾಯಪಡಿಸು.
  2. ಕಟ್ಟುಬೀಳಿಸುವಂತಿರು; ಕಟ್ಟಿಹಾಕುವಂತಿರು; ನಿರ್ಬಂಧಕವಾಗಿರು.
  3. (ಉಪಕಾರ, ಸಹಾಯ ಮಾಡಿ) ಋಣಿಯನ್ನಾಗಿಸು; (ಉಪಕಾರದ) ಹೊರೆ ಹೊರಿಸು.
  4. ಸಂತೋಷಪಡಿಸು; ತೃಪ್ತಿಪಡಿಸು; ಉಪಕಾರಮಾಡು; ಅನುಗ್ರಹಿಸು; ಉಪಕರಿಸು: oblige me by leaving (ಹೋಗು ಎನ್ನುವುದಕ್ಕೆ ಸೌಮ್ಯೋಕ್ತಿಯಾಗಿ) ಹೋಗುವ (ಮೂಲಕ) ಉಪಕಾರ ಮಾಡು.
  5. (ಅನೇಕ ವೇಳೆ ಅಕರ್ಮಕವಾಗಿ ಪ್ರಯೋಗ) ಸಹಾಯ, ಉಪಕಾರ–ಮಾಡು: will you oblige ನನಗೆ ಸಹಾಯ ಮಾಡುತ್ತೀಯಾ?
  6. (ಕರ್ಮಣಿ ಪ್ರಯೋಗದಲ್ಲಿ) ಋಣಿಯಾಗು; ಕೃತಜ್ಞನಾಗಿರು: am obliged to you for your help ನಿನ್ನ ಸಹಾಯಕ್ಕಾಗಿ ಋಣಿಯಾಗಿದ್ದೇನೆ.
  7. (ಪ್ರಾಚೀನ ಪ್ರಯೋಗ ಯಾ ನ್ಯಾಯಶಾಸ್ತ್ರ) (ಆಣೆ, ಪ್ರಮಾಣ, ಕರಾರು, ಮೊದಲಾದವುಗಳಿಂದ ಒಬ್ಬನನ್ನು ಯಾ ಒಂದು ಕೆಲಸ ಮಾಡಲು) ಕಟ್ಟು ಬೀಳಿಸು; ನಿರ್ಬಂಧಕ್ಕೆ ಒಳಗಾಗಿಸು.
  8. (ಆಡುಮಾತು) ವಿನೋದ ಕೂಟಕ್ಕೆ (ಹಾಡು ಮೊದಲಾದ) ಕೊಡುಗೆ ಕೊಡು.
ಅಕರ್ಮಕ ಕ್ರಿಯಾಪದ

(ಆಡುಮಾತು) (ಹಾಡು ಮೊದಲಾದವುಗಳಿಂದ, ನಿರ್ದಿಷ್ಟ ನೆರವಿನಿಂದ, ಮನರಂಜನೆಯಿಂದ) ಸಹಾಯ ಮಾಡು: Divya obliged with a song ದಿವ್ಯಾಳು ಒಂದು ಹಾಡು ಹಾಡಿ ಸಹಾಯ ಮಾಡಿದಳು.

ಪದಗುಚ್ಛ

much obliged ವಂದನೆಗಳು; ಕೃತಜ್ಞನಾಗಿದ್ದೇನೆ.