obligation ಆಬ್‍ಲಿಗೇಷ(ಷ್‍)ನ್‍
ನಾಮವಾಚಕ
  1. (ಕಾಯಿದೆ, ಅನುಶಾಸನ, ಕರ್ತವ್ಯ, ಕರಾರು, ಮೊದಲಾದವುಗಳ) ಕಟ್ಟುಪಾಡು; ನಿರ್ಬಂಧ; ಬಂಧಕ ಶಕ್ತಿ.
  2. (ಒಬ್ಬನ) ಅವಶ್ಯ, ಅನಿವಾರ್ಯ–ಕರ್ತವ್ಯ; ಹೊತ್ತ–ಹೊಣೆ, ಜವಾಬ್ದಾರಿ, ಭಾರ, ಹೊರೆ.
  3. (ಬರೆದುಕೊಟ್ಟ) ಕರಾರು; ಮುಚ್ಚಳಿಕೆ: ಮುಖ್ಯವಾಗಿ ತಪ್ಪಿದರೆ ಶಿಕ್ಷೆಗೊಳಪಡಿಸಬಹುದಾದ, ಮಾಡಲೇಬೇಕೆಂದು ನಿರ್ಬಂಧಿಸಬಹುದಾದ ಕರಾರು, ಒಪ್ಪಂದ.
  4. ಉಪಕಾರ; ಪ್ರಯೋಜನ: repay an obligation ಪಡೆದ ಉಪಕಾರ ತೀರಿಸು; ಉಪಕಾರ ಮಾಡಿದ್ದಕ್ಕೆ ಪ್ರತ್ಯುಪಕಾರ ಮಾಡು.
  5. (ಇನ್ನೊಬ್ಬರಿಂದಾಗಿರುವ ಸೇವೆಯ ಯಾ ಉಪಕಾರದ) ಋಣ; ಕೃಜ್ಞತೆಯ ಭಾರ: be under an obligation (ಒಬ್ಬರಿಂದಾಗಿರುವ ಸೇವೆಯ ಯಾ ಉಪಕಾರದ) ಋಣ ಹೊತ್ತಿರು; ಹಂಗಿಗೆ ಒಳಪಟ್ಟಿರು.
ಪದಗುಚ್ಛ
  1. day of obligation (ಚರ್ಚ್‍) ಎಲ್ಲರೂ ಹಾಜರಿರಬೇಕಾದ ಪ್ರಭುಭೋಜನ ಸಂಸ್ಕಾರದ ದಿನ.
  2. of obligation (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬೀಳಿಸಿರುವ; ನಿರ್ಬಂಧಕ್ಕೊಳಗಾದ.
  3. put under an obligation (ಒಬ್ಬನ ಮೇಲೆ) ಉಪಕಾರದ ಋಣ ಹೊರಿಸು.