objectivism ಅಬ್‍ಜೆಕ್ಟಿವಿಸ(ಸ್‍)ಮ್‍
ನಾಮವಾಚಕ
  1. ವಸ್ತುನಿಷ್ಠತೆ; ಜ್ಞೇಯಕ್ಕೆ , ಎಂದರೆ ಬಾಹ್ಯ ವಸ್ತು ಯಾ ವಿಷಗಳಿಗೆ, (ಜ್ಞಾತೃವಿಗಿಂತ) ಹೆಚ್ಚು ಪ್ರಾಮುಖ್ಯ ಕೊಡುವ ಪ್ರವೃತ್ತಿ.
  2. ಜ್ಞೇಯಪ್ರಾಧಾನ್ಯ ವಾದ; ಜ್ಞಾತೃಭಿನ್ನವಾದ ವಸ್ತುವನ್ನು ಅರಿಯುವುದು ಆದ್ಯವೂ ಪ್ರಧಾನವೂ ಆದದ್ದು ಎಂದು ಪ್ರತಿಪಾದಿಸುವ ಸಿದ್ಧಾಂತ.
  3. ಜ್ಞಾನ ವಾಸ್ತವಿಕವಾದ; ಮಾನವನ ಜ್ಞಾನಕ್ಕೆ ವಸ್ತುರೂಪೀಯ ಆಧಾರವಿದೆ ಎಂದು ಪ್ರತಿಪಾದಿಸುವ ಸಿದ್ಧಾಂತ.
  4. ವಸ್ತುನಿಷ್ಠತಾವಾದ; ಪ್ರಮಾಣಗಳ ಮೂಲಕ ನಿರೂಪಿಸಲು ಸಾಧ್ಯವಾಗದ ಆಧಾರಗಳನ್ನೆಲ್ಲ ವರ್ಜಿಸಿ ಕೇವಲ ವಸ್ತುನಿಷ್ಠ ವಿಶ್ಲೇಷಣೆಯನ್ನು ಎತ್ತಿ ಹಿಡಿದಿರುವ ಸಿದ್ಧಾಂತ.
  5. ವಾಸ್ತವಿಕತಾವಾದ; ಕೆಲವು ವಿಷಯಗಳು, ಮುಖ್ಯವಾಗಿ ನೈತಿಕ ತತ್ತ್ವಗಳು, ಅವುಗಳನ್ನು ಕುರಿತ ಮಾನವ ಜ್ಞಾನಕ್ಕಿಂತ ಸ್ವತಂತ್ರವಾದ ಅಸ್ತಿತ್ವವನ್ನು ಹೊಂದಿರುತ್ತವೆ ಎಂದು ಪ್ರತಿಪಾದಿಸುವ ಸಿದ್ಧಾಂತ.
  6. ವಾಸ್ತವಿಕತಾವಾದ; ವಿಷಯಗಳನ್ನು ವಸ್ತುಭೂತವಾಗಿರುವಂತೆ ಯಾ ವಾಸ್ತವಿಕವಾಗಿ ಅವು ಇರುವಂತೆ ನಿರೂಪಿಸುವ ಕಲೆ ಯಾ ಸಾಹಿತ್ಯವನ್ನು ಎತ್ತಿಹಿಡಿಯುವ ಸಿದ್ಧಾಂತ ಯಾ ಅದರ ಅನುಷ್ಠಾನ.