See also 2objective
1objective ಅಬ್‍ಜಿಕ್ಟಿವ್‍
ಗುಣವಾಚಕ
  1. (ತತ್ತ್ವಶಾಸ್ತ್ರ) ವಾಸ್ತವ(ವಾದ); ಬಾಹ್ಯವಸ್ತುವಿನ; ಮನಸ್ಸಿಗೆ ಹೊರಗಿನ; (ಜ್ಞಾತೃವಿಗೆ ಸಂಬಂಧಿಸದೆ) ಜ್ಞೇಯಕ್ಕೆ ಮಾತ್ರ ಸಂಬಂಧಿಸಿದ.
  2. (ವ್ಯಕ್ತಿ, ಲೇಖನ, ಚಿತ್ರ, ಚರ್ಚೆ, ಮೊದಲಾದವುಗಳ ವಿಷಯದಲ್ಲಿ)
    1. ಬಾಹ್ಯವಸ್ತುಗಳಿಗೆ ಸಂಬಂಧಿಸಿದ; ಮನಸ್ಸಿಗೆ ಹೊರಗಣ ವಸ್ತುಗಳನ್ನು ಕುರಿತ.
    2. ವಸ್ತುನಿಷ್ಠ; ವಾಸ್ತವಿಕ; ವಸ್ತುಭೂತ; ಇದ್ದಂತಿರುವ; ವಸ್ತುಸ್ಥಿತಿಯನ್ನು ನಿರೂಪಿಸುವ (ವೈಯಕ್ತಿಕ ಭಾವಗಳಿಂದ, ಅಭಿಪ್ರಾಯಗಳಿಂದ ಬಣ್ಣ ಕಟ್ಟದೆ) ವಾಸ್ತವವಾದ, ಇದ್ದಂತಿರುವ ಸಂಗತಿಗಳನ್ನು ತಿಳಿಸುವ.
  3. (ವ್ಯಾಕರಣ)
    1. (ಪದದ ವಿಷಯದಲ್ಲಿ) ಕ್ರಿಯೆಗೆ ವಿಷಯವಾದ.
    2. (ಪದದ ವಿಷಯದಲ್ಲಿ) ಸಕರ್ಮಕ ಕ್ರಿಯಾಪದಕ್ಕೆ ಕರ್ಮಪದವಾದ ಯಾ ಉಪಸರ್ಗದಿಂದ ನಿಯಂತ್ರಿತವಾದ.
    3. (ವಿಭಕ್ತಿಯ ವಿಷಯದಲ್ಲಿ) ದ್ವಿತೀಯಾ.
  4. ಉದ್ದಿಷ್ಟ; ಉದ್ದೇಶಿಸಿದ: objective point ಉದ್ದಿಷ್ಟ ವಿಷಯ.
  5. (ವೈದ್ಯಶಾಸ್ತ್ರ) (ರೋಗ ಲಕ್ಷಣಗಳ ವಿಷಯದಲ್ಲಿ) ಬಾಹ್ಯಗೋಚರ; ರೋಗಿಯ ಅನುಭವಕ್ಕೆ ಮಾತ್ರವೇ ಒಳಪಟ್ಟಿರದೆ ಹೊರಗಿನವನಿಗೂ (ವೈದ್ಯ ಮೊದಲಾದ ವ್ಯಕ್ತಿಗೂ) ಗೋಚರವಾಗುವ.
ಪದಗುಚ್ಛ
  1. objective case ದ್ವಿತೀಯಾ ವಿಭಕ್ತಿ; ಸಕರ್ಮಕ ಕ್ರಿಯಾಪದಕ್ಕೆ ಕರ್ಮಪದವಾದ ಯಾ ಉಪಸರ್ಗದಿಂದ ನಿಯಂತ್ರಿತವಾದ ನಾಮಪದದ ಯಾ ಸರ್ವನಾಮದ ವಿಭಕ್ತಿ.
  2. objective genitive ದ್ವಿತೀಯಾರ್ಥಕ ಷಷ್ಠೀ (ವಿಭಕ್ತಿ): the fear of God (ಎಂಬಲ್ಲಿ of God) ದೇವರ ಭಯ; ದೇವರನ್ನು ಕುರಿತ ಭಯ.
  3. objective point
    1. (ಸೈನ್ಯ) ಗುರಿ; ಲಕ್ಷ್ಯ; (ಸೈನ್ಯಗಳನ್ನು ಯಾವುದರತ್ತ ನುಗ್ಗಿಸಲಾಗುತ್ತದೆಯೋ ಅಂಥ) ಉದ್ದಿಷ್ಟಸ್ಥಾನ.
    2. (ರೂಪಕವಾಗಿ) ಗುರಿ; ಲಕ್ಷ್ಯ; ಉದ್ದೇಶ; ಉದ್ದಿಷ್ಟ ವಿಷಯ.
See also 1objective
2objective ಅಬ್‍ಜಿಕ್ಟಿವ್‍
ನಾಮವಾಚಕ
  1. ಗುರಿ; ಲಕ್ಷ್ಯ; ಉದ್ದೇಶ; ಉದ್ದಿಷ್ಟ ವಿಷಯ.
  2. (ವ್ಯಾಕರಣ) = 1objective ?ಪಗು? \((೧)\).
  3. = object-glass.