objection ಅಬ್‍ಜೆಕ್‍ಷನ್‍
ನಾಮವಾಚಕ
  1. ಆಕ್ಷೇಪಣೆ; ಅಡ್ಡಿ; ತಕರಾರು; ವಿರುದ್ಧವಾದ ಯಾ ಅಸಮ್ಮತಿ ಸೂಚಕವಾದ–ಅಭಿವ್ಯಕ್ತಿ ಯಾ ಭಾವನೆ.
  2. ಆಕ್ಷೇಪ(ಣೆ); ಆಕ್ಷೇಪಿಸುವುದು; ಅಡ್ಡಿಮಾಡುವುದು; ಆಕ್ಷೇಪಿಸುವ ಕ್ರಿಯೆ.
  3. ವಿರುದ್ಧ ತರ್ಕ ಯಾ ಹೇಳಿಕೆ.
  4. ಆಕ್ಷೇಪಿಸಿದ, ಆಕ್ಷೇಪಣೆಗೊಳಪಟ್ಟ–ವಿಷಯ.
  5. ಅಸಮ್ಮತಿ; ಅಸಂತೋಷ ಸೂಚನೆ.