See also 2object
1object ಆಬ್‍ಜಿಕ್ಟ್‍
ನಾಮವಾಚಕ
  1. (ಕಣ್ಣಿಗೆ ಕಾಣಿಸುವ ಯಾ ಇಂದ್ರಿಯಗೋಚರವಾದ) ಭೌತಿಕ–ವಸ್ತು, ಪದಾರ್ಥ.
  2. (ಯಾವುದೇ ಕ್ರಿಯೆಗೆ ಯಾ ಭಾವಕ್ಕೆ ವಿಷಯವಾದ, ಪಾತ್ರವಾದ) ವ್ಯಕ್ತಿ ಯಾ ವಸ್ತು: the object of attention ಗಮನಕ್ಕೆ ಗುರಿಯಾದ ವ್ಯಕ್ತಿ ಯಾ ವಸ್ತು. the object of our study ನಮ್ಮ ಅಧ್ಯಯನದ ವಿಷಯ, ವಸ್ತು. he is a proper object of (or for) charity ದಾನಕ್ಕೆ ಅವನು ಸತ್ಪಾತ್ರ; ಅವನು ದಾನ ಪಡೆಯಲು ಸರಿಯಾದ, ಅರ್ಹನಾದ ವ್ಯಕ್ತಿ.
  3. ಗುರಿ; ಉದ್ದೇಶ; ಲಕ್ಷ್ಯ; ಗುರಿಯಿಟ್ಟ ವಸ್ತು.
  4. (ವ್ಯಾಕರಣ) ಕರ್ಮ(ಪದ); ಸಕರ್ಮಕ ಕ್ರಿಯಾಪದದಿಂದ ಇಲ್ಲವೆ ಉಪಸರ್ಗದಿಂದ ನಿಯಂತ್ರಿತವಾಗುವ ನಾಮಪದ ಇಲ್ಲವೆ ಅದಕ್ಕೆ ಸಮಾನವಾದ ಭಾಗ.
  5. (ತತ್ತ್ವಶಾಸ್ತ್ರ) ಜ್ಞೇಯ ವಸ್ತು; ಜ್ಞಾತೃವಿನ ಜ್ಞಾನಕ್ಕೆ ವಿಷಯವಾದ ವಸ್ತು; ಜ್ಞಾತೃವಿಗೆ ಯಾ ಮನಸ್ಸಿಗೆ ಬಾಹ್ಯವಾದ, ಭಿನ್ನವಾದ–ವಿಷಯ, ವಸ್ತು. ಪದಾರ್ಥ.
  6. (ಹೀನಾರ್ಥಕ ಪ್ರಯೋಗ) ಬಡಪಾಯಿ; ಮುಖ್ಯವಾಗಿ ಕನಿಕರ ಹುಟ್ಟಿಸುವ ಯಾ ಹಾಸ್ಯಾಸ್ಪದವಾದ ಸ್ವರೂಪವುಳ್ಳ ವ್ಯಕ್ತಿ ಯಾ ವಸ್ತು.
  7. (ಕಂಪ್ಯೂಟರ್‍) ಮಾಹಿತಿಯ ಒಂದು ತಂಡ ಮತ್ತು ಅದರ ನಿರ್ವಹಣೆಯ ವಿವರಣೆ.
  8. ದೃಶ್ಯವಸ್ತು; ವೀಕ್ಷಣ ಸಾಧನಗಳಿಂದ ಯಾ ಉಪಕರಣಗಳಿಂದ ನೋಡಿದ ಯಾ ಚಿತ್ರಿಸಿ ತೋರಿಸಿದ ವಸ್ತು.
ಪದಗುಚ್ಛ
  1. direct object ಪ್ರತ್ಯಕ್ಷ ಕರ್ಮಪದ; ಪ್ರಧಾನ ಕರ್ಮಪದ: I gave him a shilling ಎಂಬಲ್ಲಿ shilling ಎಂಬುದು.
  2. indirect object ಪರೋಕ್ಷ ಕರ್ಮಪದ; ಅಪ್ರಧಾನ ಯಾ ಗೌಣ ಕರ್ಮಪದ: I gave him a shilling ಎಂಬಲ್ಲಿ him.
  3. no object ಮುಖ್ಯಾಂಶವಲ್ಲ; ಮುಖ್ಯ ವಿಷಯವಲ್ಲ: money, time, distance, etc., is no object ಹಣ, ಕಾಲ, ದೂರ, ಮೊದಲಾದವು (ನಮಗೆ) ಮುಖ್ಯವಲ್ಲ.
  4. object of the exercise (ಯಾವುದೇ) ಪ್ರಧಾನ ಚಟುವಟಿಕೆಯ ಮುಖ್ಯ–ಗುರಿ, ಉದ್ದೇಶ ಅಂಶ.
  5. prepositional object ಉಪಸರ್ಗೀಯ ಕರ್ಮಪದ, ಉದಾಹರಣೆಗೆ I got it from him ಎಂಬಲ್ಲಿ him.
See also 1object
2object ಅಬ್‍ಜೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಒಂದರ ವಿಷಯದಲ್ಲಿ ಲಕ್ಷಣ, ವಾಸ್ತವಾಂಶ, ಮೊದಲಾದವನ್ನು) ಆಕ್ಷೇಪವಾಗಿ ಮುಂದಿಡು, ಒಡ್ಡು: objected that they were kept waiting ತಮ್ಮನ್ನು ಕಾಯಿಸಿದರೆಂದು ಆಕ್ಷೇಪಿಸಿದ.
  2. ಆಕ್ಷೇಪಿಸು; (ಒಂದು ವಿಷಯಕ್ಕೆ ಒಂದು ಗುಣ ಯಾ ವಾಸ್ತವಾಂಶ) ವಿರುದ್ಧವಾಗಿದೆಯೆಂದು ಯಾ ಹಾನಿಕರವಾಗಿದೆಯೆಂದು ಆಪಾದಿಸು, ಎತ್ತಿಹೇಳು.
ಅಕರ್ಮಕ ಕ್ರಿಯಾಪದ

ಆಕ್ಷೇಪಿಸು; ಅಡ್ಡಿತೆಗೆ; ಅಸಮ್ಮತಿ–ತೋರು, ಸೂಚಿಸು; ಆಕ್ಷೇಪವೆತ್ತು: I object to being treated like this ನನ್ನ ವಿಷಯದಲ್ಲಿ ಹೀಗೆ ನಡೆದುಕೊಳ್ಳುತ್ತಿರುವುದನ್ನು, ನನಗೆ ತೋರಿಸುತ್ತಿರುವ ಈ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. objecting aganist government policies ಸರ್ಕಾರಿ ನೀತಿಗಳ ಬಗ್ಗೆ ಆಕ್ಷೇಪಿಸುತ್ತಾ, ಆಕ್ಷೇಪವೆತ್ತುತ್ತಾ.

ಪದಗುಚ್ಛ

I object (ಬ್ರಿಟನ್ನಿನ ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ಮಂಡಿಸಿದ ಮಸೂದೆಯನ್ನು ಚರ್ಚಿಸಗೊಡದೆ ಬದಿಗೊತ್ತುವಂತೆ ಮಾಡಲು ಆ ಸಭೆಯ ಸದಸ್ಯನು ಬಳಸುವ ಮಾತು) ನಾನು (ಇದನ್ನು) ಆಕ್ಷೇಪಿಸುತ್ತೇನೆ, ವಿರೋಧಿಸುತ್ತೇನೆ.