obedience ಓಬೀಡಿಅನ್ಸ್‍
ನಾಮವಾಚಕ
  1. (ಕಾರ್ಯ, ಅಭ್ಯಾಸ, ಗುಣ ಯಾ ರೂಪದಲ್ಲಿ) ವಿಧೇಯತೆ; ನಮ್ರತೆ; ಹೇಳಿದಂತೆ–ಕೇಳುವಿಕೆ, ನಡೆಯುವಿಕೆ.
  2. ವಿಧೇಯತೆ; ಇನ್ನೊಬ್ಬರ ಆಡಳಿತಕ್ಕೆ ಯಾ ಅಧಿಕಾರಕ್ಕೆ ತಲೆಬಾಗುವಿಕೆ.
  3. ವಿಧೇಯತೆ; ಕಾನೂನನ್ನು ಯಾ ಆಜ್ಞೆಯನ್ನು ಪಾಲಿಸುವಿಕೆ.
  4. (ಚರ್ಚ್‍, ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍)
    1. ಸಂನ್ಯಾಸಿ ಜೀವನದ ಯಾ ಮಠದ ನಿಯಮ ಪಾಲನೆ, ನಿಯಮಾನುಸರಣೆ.
    2. ವಿಧೇಯತೆಯನ್ನು ಪಡೆಯುವ ಪದವಿ, ಅಧಿಕಾರ, ಸ್ಥಾನ.
    3. ಅಧಿಕಾರ ಕ್ಷೇತ್ರ: the Roman obedience ರೋಮನ್‍ ಚರ್ಚಿನ ಅಧಿಕಾರ ಕ್ಷೇತ್ರ.
    4. (ಅಧಿಕಾರಕ್ಕೊಳಪಟ್ಟ ಪ್ರದೇಶದ) ವಿಧೇಯ ವರ್ಗ; ವಿಧೇಯತೆ ಸಲ್ಲಿಸಲು ಬದ್ಧರಾದ ಜನ: return to the obedience of the Pope ಪೋಪನ ಅಧಿಕಾರವ್ಯಾಪ್ತಿಗೆ ಹಿಂದಿರುಗು.
    5. ಸಂನ್ಯಾಸಿ ಮಠದ ಯಾ ಕಾನ್ವೆಂಟಿನ ಕೆಲಸ ಯಾ ಕರ್ತವ್ಯ.
ಪದಗುಚ್ಛ
  1. in obedience to (ಕಾನೂನಿಗೆ, ಆಜ್ಞೆಗೆ) ಅನುಸಾರವಾಗಿ ಯಾ ವಿಧೇಯವಾಗಿ.
  2. passive obedience
    1. ಅಸಮ್ಮತ ವಿಧೇಯತೆ; ಮನಸ್ಸಿಲ್ಲದ ವಿಧೇಯತೆ; ಸಹಕರಿಸಲು ಇಷ್ಟವಿಲ್ಲದಿದ್ದರೂ ಸ್ವಸಂಕಲ್ಪವನ್ನು ಬದಿಗಿಟ್ಟು, ಇನ್ನೊಬ್ಬನ ಇಷ್ಟದಂತೆ ನಡೆಯುವುದು.
    2. ಅವಿಚಾರಿತ ವಿಧೇಯತೆ; ಎಂಥದೇ ಆಜ್ಞೆಯಾಗಲಿ ಮನಸ್ಸಿಗೆ ಹಚ್ಚಿಕೊಳ್ಳದೆ ಅದರಂತೆ ನಡೆಯುವುದು; ಆಜ್ಞೆಯ ಔಚಿತ್ಯವನ್ನು ಪ್ರಶ್ನಿಸದೆ ಪಾಲಿಸುವುದು.