ob- ಅಬ್‍-
ಪೂರ್ವಪ್ರತ್ಯಯ

c ಗೆ ಹಿಂದೆ oc- (occasion), f ಗೆ ಹಿಂದೆ of (offend) p ಗೆ ಹಿಂದೆ op- (oppose) ರೂಪಾಂತರ ಹೊಂದುವ, ಮುಖ್ಯವಾಗಿ ಲ್ಯಾಟಿನ್‍ ಮೂಲದ ಪದಗಳಲ್ಲಿ ಈ ಅರ್ಥಗಳಲ್ಲಿ ಪ್ರಯೋಗವಾಗುವ ಪೂರ್ವಪ್ರತ್ಯಯ:

  1. ಗೋಚರತೆ; ಪ್ರಕಟವಾಗಿರುವಿಕೆ; object, obnoxious, obtrude, obverse.
  2. ಎದುರಾಗು; ಅಭುಮುಖವಾಗು; ಎದುರಿಗೆ–ಕಾಣು, ಇರು, ನಿಲ್ಲು: observe, obvious, opportune.
  3. ಯಾವುದೇ ದಿಕ್ಕಿನಲ್ಲಿ; ಕಡೆಗೆ: oblation, oblong, offer.
  4. ವಿರೋಧ; ದ್ವೇಷ; objurgate, obloquy, obstreperous, oppose, oppress, opprobrium.
  5. ಪ್ರತಿರೋಧ; ನಿರೋಧಕ; ನಿರೋಧ; ತಡೆ: obdurate, obstinate, obtuse.
  6. ಅಡ್ಡಿ; ಅಡಚಣೆ; ಮರೆ ಮಾಡುವಿಕೆ: obese, obscure, obstacle, obstruct, occlude, occult, oppilate.
  7. ಅಂತ್ಯ; ಕೊನೆ; ಸಮಾಪ್ತಿ; ಸಂಪೂರ್ಣವಾಗಿರುವಿಕೆ: obsolete, obtain, occident, occupy.
  8. (ಆಧುನಿಕ ವೈಜ್ಞಾನಿಕ ಪಾರಿಭಾಷಿಕಗಳಲ್ಲಿ) ವಿಪರ್ಯಯವಾಗಿ; ಪ್ರತಿಲೋಮವಾಗಿ; ವ್ಯತಿರಿಕ್ತವಾಗಿ; ಸಾಮಾನ್ಯವಾದುದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಯಾ ರೀತಿಯಲ್ಲಿ: obconical, obovate, obcordate.
  9. ಘಟಿಸು; ಸಂಭವಿಸು; ಸಂಯೋಗದಿಂದ ಆಗು: occasion, occur, offend.
  10. ನಮ್ರತೆ; ವಿಧೇಯತೆ: obey, obsequious.