oath ಓತ್‍
ನಾಮವಾಚಕ
(ಬಹುವಚನ oaths ಉಚ್ಚಾರಣೆ ಓದ್ಸ್‍).
  1. (ತನ್ನ ಹೇಳಿಕೆ ನಿಜವೆಂದು ತೋರಿಸಲು ಯಾ ತಾನು ಕೊಟ್ಟ ಮಾತನ್ನು ನಡೆಸಿಕೊಡುವ ನಂಬಿಕೆ ಉಂಟುಮಾಡಲು, ದೇವರನ್ನೋ ಯಾರಾದರೂ ಪೂಜ್ಯರನ್ನೋ ಸಾಕ್ಷಿಯಾಗಿ ಕೋರಿ ಮಾಡುವ) ಪ್ರಮಾಣ; (ಇಟುಕೊಳ್ಳುವ) ಆಣೆ.
  2. ಪ್ರಮಾಣ(ವಚನ); (ತನ್ನ ಹೇಳಿಕೆ ನಿಜವೆಂದು ಯಾ ತಾನು ಕೊಟ್ಟಿರುವ ಮಾತನ್ನು ನಡೆಸಿಯೇ ತೀರುವೆನೆಂದು ಘೋಷಿಸುವ) ಆಣೆ ಮಾತು, ಪ್ರಮಾಣ ವಚನ: oath of allegiance ಸ್ವಾಮಿನಿಷ್ಠೆ, ದೇಶಭಕ್ತಿ ತೋರಿಸುವ ಪ್ರಮಾಣ ವಚನ. oath of office ಅಧಿಕಾರ ವಹಿಸಿಕೊಳ್ಳುವಾಗ ತೆಗೆದುಕೊಳ್ಳುವ ಪ್ರಮಾಣ ವಚನ. oath of supremacy ಪರಮಾಧಿಕಾರದ ಪ್ರಮಾಣ ವಚನ.
  3. (ಯಾವುದೇ ವಿಷಯವನ್ನು ಒತ್ತಿ ಹೇಳುವಲ್ಲಿ, ಇಲ್ಲವೆ ಕೋಪ ಮೊದಲಾದವನ್ನು ತೋರಿಸುವಲ್ಲಿ, ಬಳಸುವ) ಪಾಷಂಡ ಮಾತು, ಉದ್ಗಾರ; ಬೈಗುಳ; ನಿಂದೆ; ಶಾಪ.
ಪದಗುಚ್ಛ
  1. on (or under) oath ಆಣೆ ಇಟ್ಟು; ಪ್ರಮಾಣ ಮಾಡಿ.
  2. take, make, swear an path ಆಣೆ ಇಡು; ಅಣೆ ಇಟ್ಟು ಹೇಳು; ಪ್ರಮಾಣ ಮಾಡು.