oat ಓಟ್‍
ನಾಮವಾಚಕ
  1. ಓಟ್‍:
    1. ತೋಕೆ ಗೋಧಿ; ಅವೆನ ಸ್ಯಾಟಿವ ಕುಲಕ್ಕೆ ಸೇರಿದ, ಶೀತವಲಯಗಳಲ್ಲಿ ಬೆಳೆಸುವ ಒಂದು ಧಾನ್ಯದ ಗಿಡ ಯಾ ಸಸ್ಯ.
    2. (ಬಹುವಚನದಲ್ಲಿ) ಅಹಾರವಾಗಿ ಬಳಸುವ, ಈ ಗಿಡದ ಧಾನ್ಯ.
    3. ಅವೆನ ಕುಲಕ್ಕೆ ಸೇರಿದ, ಯಾವುದೇ ಧಾನ್ಯ, ಮುಖ್ಯವಾಗಿ ಕಾದು ಓಟ್‍.
  2. (ಕಾವ್ಯಪ್ರಯೋಗ).
    1. ಓಟ್‍ ಕಾಂಡ; ಸಾಮಾನ್ಯವಾಗಿ ಹಳ್ಳಿಯ ಯಾ ಗ್ರಾಮೀಣ ಕಾವ್ಯದಲ್ಲಿ ಕುರುಬರು ಮೊದಲಾದವರು ಕೊಳಲಾಗಿ ಬಳಸುವ, ಒಟ್‍ ಗಿಡದ ಕಾಂಡ.
    2. ಹಳ್ಳಿಯ ಹಾಡು, ಕವನ; ಗ್ರಾಮೀಣ ಕಾವ್ಯ; ಗ್ರಾಮ ಜೀವನವನ್ನು ಕುರಿತ ಪದ್ಯ, ಕಾವ್ಯ.
  3. (ಬಹುವಚನದಲ್ಲಿ) (ಅಶಿಷ್ಟ) ಲೈಂಗಿಕ ಸುಖ ತೃಪ್ತಿ.
ಪದಗುಚ್ಛ
  1. feel one’s pats (ಆಡುಮಾತು)
    1. (ಅಮೆರಿಕನ್‍ ಪ್ರಯೋಗ) ತಾನೊಬ್ಬ ಪ್ರಮುಖ ವ್ಯಕ್ತಿಯೆಂದು ಭಾವಿಸಿಕೊ; ತಾನೊಬ್ಬ ದೊಡ್ಡ ವ್ಯಕ್ತಿಯೆಂದು ಬಾವಿಸಿಕೊ.
    2. ಉಲ್ಲಾಸದಿಂದಿರು; ಉತ್ಸಾಹ ತುಂಬಿರು; ಚಟುವಟಿಕೆಯಿಂದ ಕೊಡಿಸು.
  2. off one’s oats (ಆಡುಮಾತು) ಹಸಿವಿಲ್ಲದಿರು; ತಿನ್ನಲು ಇಚ್ಛೆಯಿಲ್ಲದಿರು; ಆಹಾರ ಬೇಡದಿರು.
  3. sow one’s oats (or wild oats) (ಸಂಯಮ, ಗಾಂಭೀರ್ಯಗಳು ಸ್ಥಿರಗೊಳ್ಳುವ ಮುನ್ನ) ಯೌವನದ ಭರದಲ್ಲಿ ಸ್ವಚ್ಛಂದವಾಗಿ, ಸ್ತೈರವಾಗಿ ವರ್ತಿಸು; ಯೌವನದಲ್ಲಿ ಗಂಡಾಗೂಳಿಯಾಗಿರು.
  4. wild oat = oat-grass.