oak-apple ಓಕ್‍ಆಪ್‍ಲ್‍
ನಾಮವಾಚಕ

ಓಕ್‍ ಸೇಬು; ಓಕ್‍ ಮರಗಳಲ್ಲಿ ಕೆಲವು ಬಗೆಯ ಕಣಜದ ಹುಳುಗಳ ಮರಿಗಳಿಂದ ಉಂಟಾಗುವ, ಸೇಬಿನಂಥ ಗಂಟು.

ಪದಗುಚ್ಛ

oak-apple day ಮೇ 29ನೆಯ ದಿನಾಂಕ; 1660ರಲ್ಲಿ ಇಂಗ್ಲೆಂಡಿನಲ್ಲಿ ರಾಜಪ್ರಭುತ್ವವು ಪುನಃ ಸ್ಥಾಪಿತವಾದಾಗ ಎರಡನೆಯ ಚಾರ್ಲ್ಸ್‍ ದೊರೆತನಕ್ಕೆ ಬಂದ ದಿನ (ಅಂದು ಇಂಗ್ಲೆಂಡಿನ ಹಳ್ಳಿಗರು ರಾಯಲ್‍ ಓಕ್‍ನ ಸ್ಮಾರಕವಾಗಿ ಓಕ್‍ ಸೇಬನ್ನು ಅಲಂಕಾರವಾಗಿ ಧರಿಸುತ್ತಾರೆ).