numerous ನ್ಯೂಮರಸ್‍
ಗುಣವಾಚಕ
  1. (ಬಹುವಚನದ ಜೊತೆಗೆ) ಬಹಳ; ಅನೇಕ: he received numerous gifts ಅವನಿಗೆ ಅನೇಕ ಉಡುಗೊರೆಗಳು ದೊರೆತವು.
  2. ಬಹುಸಂಖ್ಯಾಕ; ಅನೇಕ ಘಟಕ ಯಾ ಅಂಶಗಳುಳ್ಳ: a numerous library ಬಹು ಪುಸ್ತಕಗಳುಳ್ಳ ಗ್ರಂಥಭಂಡಾರ.
    1. (ಪ್ರಾಚೀನ ಪ್ರಯೋಗ) ಅನೇಕರಿಂದ – ಬರುವ, the numerous voices of the people ಬಹು ಕಂಠಗಳ ಧ್ವನಿ, ವಾಣಿ.
    2. ಕಿಕ್ಕಿರಿದ; ತುಂಬಿದ; ಜನಭರಿತ: numerous gathering ಕಿಕ್ಕಿರಿದ ಸಭೆ.
  3. (ಪದ್ಯ ಯಾ ಗದ್ಯದ ವಿಷಯದಲ್ಲಿ) ಲಯಬದ್ಧ; ಸುಶ್ರಾವ್ಯ: numerous verse ಸುಶ್ರಾವ್ಯ ಕಾವ್ಯ.