non- ನಾನ್‍-
ಪೂರ್ವಪ್ರತ್ಯಯ

ನಿಷೇಧಾರ್ಥಕ ಪೂರ್ವಪ್ರತ್ಯಯ, ಮುಖ್ಯವಾಗಿ

  1. ಮಾಡದ, ಇಲ್ಲದ ಯಾ ಸಂಬಂಧಪಡದ: non-attendance ಹಾಜರಾಗದಿರುವಿಕೆ; ಗೈರು ಹಾಜರಿ. non-payment ಪಾವತಿ ಮಾಡದಿರುವುದು.
  2. ವಿವರಿಸಿದ ವರ್ಗಕ್ಕೆ, ಬಗೆಗೆ – ಸೇರದ; non-alcoholic ಆಲ್ಕಹಾಲ್‍ ವರ್ಗಕ್ಕೆ ಸೇರದ. non-member ಸದಸ್ಯರ ವರ್ಗಕ್ಕೆ ಸೇರದ; ಸದಸ್ಯನಲ್ಲದ.
  3. ಗುಣವಾಚಕವಾಗಿ ಬಳಸುವ ಪದಗಳನ್ನು ರಚಿಸುವಲ್ಲಿ: non-party ಪಕ್ಷಕ್ಕೆ ಸೇರಿರದ; ಪಕ್ಷಾತೀತವಾದ.
  4. ಇಲ್ಲದ; ಅಭಾವದ: non-access ಪ್ರವೇಶ (ಮಾರ್ಗ) ಇಲ್ಲದ.
  5. ( ಕ್ರಿಯಾವಿಶೇಷಣಗಳೊಡನೆ) ಹೇಳಿರುವ ರೀತಿಯಲ್ಲಿ ಇಲ್ಲದ: non-aggressively ಆಕ್ರಮಣಕಾರಿಯಾಗಿಲ್ಲದೆ.
  6. ಕ್ರಿಯಾಪದಗಳಿಂದ ಆಗದ, ಮಾಡದ, ಉದ್ದೇಶಕ್ಕಲ್ಲದ ಎಂಬ ಅರ್ಥದ ಗುಣವಾಚಕಗಳನ್ನು ರಚಿಸುವಲ್ಲಿ: non-skid ಜಾರದ.
  7. in- ಯಾ un- ಪೂರ್ವಪ್ರತ್ಯಯಗಳಿಂದ ರಚಿತವಾದ ನಿಷೇಧಾರ್ಥಕ ಶಬ್ದಗಳು ವಿಶಿಷ್ಟಾರ್ಥವೊಂದನ್ನೋ ವಿರುದ್ಧಾರ್ಥವೊಂದನ್ನೋ ಕೊಡುವ ಯಾ ವಿಶೇಷವಲ್ಲದ ಸಾಮಾನ್ಯ ನಿಷೇಧಾರ್ಥವನ್ನು ಕೊಡುವ ಪದಗಳನ್ನು ರಚಿಸುವಲ್ಲಿ: non-effective ಪರಿಣಾಮಕಾರಿಯಲ್ಲದ. non-human ಮಾನವನಲ್ಲದ (ಆದರೆ ಅಮಾನವೀಯವಾಗಿರದ).