nominal ನಾಮಿನಲ್‍
ಗುಣವಾಚಕ
  1. ನಾಮವಾಚಕದ ಯಾ ನಾಮವಾಚಕದಂಥ: nominal roots ನಾಮ ಪ್ರಕೃತಿಗಳು.
  2. ಹೆಸರಿನ; ಹೆಸರಿನಲ್ಲಿಯ: nominal and essential distinctions ಹೆಸರಿನ ಮತ್ತು ವಾಸ್ತವಿಕ ವ್ಯತ್ಯಾಸಗಳು.
  3. ಹೆಸರುಗಳುಳ್ಳ; ಹೆಸರುಗಳನ್ನು ತಿಳಿಸುವ, ನಮೂದಿಸಿರುವ: nominal list of officers ಅಧಿಕಾರಿಗಳ ಹೆಸರುಪಟ್ಟಿ.
  4. ಹೆಸರಿಗೆ ಮಾತ್ರವಿರುವ; ನಾಮಮಾತ್ರದ; ವಾಸ್ತವವಲ್ಲದ: nominal and real rulers ಹೆಸರಿಗೆ ಮಾತ್ರ ಆಳುವವರು (‘ನಾಮ್‍ ಕೆ ವಾಸ್ತೆ’ ರಾಜರು) ಮತ್ತು ನಿಜವಾಗಿ ಆಳುವವರು.
  5. (ಬಾಡಿಗೆ ಮೊದಲಾದವುಗಳ ವಿಷಯದಲ್ಲಿ) ಹೆಸರಿಗೆ ಮಾತ್ರ ಹಾಕಿರುವ; ಅತ್ಯಲ್ಪ ಮೊತ್ತದ; ನಿಜವಾದ ಬೆಲೆಗಿಂತ ತೀರ ಕಡಮೆ ಇರುವ: nominal rent ಹೆಸರಿಗೆ ಮಾತ್ರ ಹಾಕಿರುವ (ತೀರಾ ಕಡಮೆ) ಬಾಡಿಗೆ.
  6. ಹೆಸರುಗಳುಳ್ಳ, ಹೆಸರುಗಳನ್ನು ತಿಳಿಸುವ, ನಮೂದಿಸಿರುವ: nominal list of officers ಅಧಿಕಾರಿಗಳ ಹೆಸರುಪಟ್ಟಿ.