nightmare ನೈಟ್‍ಮೇರ್‍
ನಾಮವಾಚಕ
  1. ಸ್ವಪ್ನ ಪಿಶಾಚಿ; ನಿದ್ದೆಯಲ್ಲಿ ಎದೆಯ ಮೇಲೆ ಕುಳಿತು ಉಸಿರು ಕಟ್ಟಿಸುವಂತೆ ಮನಸ್ಸಿಗೆ ತೋರುವ, ಒಂದು ಹೆಣ್ಣು ಪಿಶಾಚಿ.
  2. ದುಃಸ್ವಪ್ನ; ಘೋರ ಸ್ವಪ್ನ.
  3. (ಆಡುಮಾತು) ದು:ಸ್ವಪ್ನದಂಥ – ಘೋರ ಅನುಭವ, ಯೋಚನೆ, ಪರಿಸ್ಥಿತಿ.
  4. ಎಡೆಬಿಡದೆ ಕಾಡುವ ಭಯ.
  5. ಅಸ್ಪಷ್ಟ ಭೀತಿಯ ವಸ್ತು.