mouthpiece ಮೌತ್‍ಪೀಸ್‍
  1. ಬಾಯಿ:
    1. ಪೀಪಿ; ಕೊಳವಿ; ಕೊಳಲು ಮೊದಲಾದ ವಾದ್ಯಗಳನ್ನು ಬಾರಿಸುವಾಗ, ತುಟಿಗಳ ಮಧ್ಯೆ ಇಟ್ಟುಕೊಳ್ಳುವ ಭಾಗ.
    2. ಮಾತನಾಡುವಾಗ ಬಾಯಿಗಿಟ್ಟುಕೊಳ್ಳುವ ಟೆಲಿಹೋನಿನ ಭಾಗ.
    3. ತುಟಿಗಳ ನಡುವೆ ಇಟ್ಟುಕೊಳ್ಳುವ ಚುಂಗಾಣಿಯ ಭಾಗ.
  2. ಮುಖವಾಣಿ; ವದನಕ; ಮತ್ತೊಬ್ಬನ ಯಾ ಇತರರ ಪರವಾಗಿ ಮಾತನಾಡುವವನು.
  3. (ಆಡುಮಾತು) ಲಾಯರು; ನ್ಯಾಯವಾದಿ.
  4. ಹೊರಗಂಡಿ; ಹೊರಕ್ಕೆ ಹೋಗಲು ಅನುಕೂಲಿಸುವಂತೆ ತಗುಲಿಸಿರುವ ಭಾಗ, ಸಾಧನ.