massive ಮ್ಯಾಸಿವ್‍
ಗುಣವಾಚಕ
  1. ದಪ್ಪವೂ ತೂಕವೂ ಆದ; ಸ್ಥೂಲವೂ ಭಾರವೂ ಆದ.
  2. ಸಾಂದ್ರವಾದ; ದಟ್ಟವಾದ; ಘನವಾದ.
  3. (ಮುಖಭಾಗ, ತಲೆ, ಆಕಾರ, ಮೊದಲಾದವುಗಳ ವಿಷಯದಲ್ಲಿ) ದಪ್ಪನಾದ; ಸ್ಥೂಲವಾದ; ದಪ್ಪ ಮಾಟದ.
  4. (ರೂಪಕವಾಗಿ) ಗಟ್ಟಿಯಾದ; ಸುದೃಢವಾದ; ತೂಕವಾದ; ಘನವಾದ; ಮಜಬೂತಾದ; ಭಾರಿ; ಬೃಹತ್ತಾದ; ಪ್ರಚಂಡ; ಅಸಾಧಾರಣ; ಅಗಾಧ: massive reputation ಭಾರಿ ಕೀರ್ತಿ.
  5. ಮಿತಿಮೀರಿದ; ಅತಿ ಹೆಚ್ಚಿನ: a massive overdose ಅತಿ ಹೆಚ್ಚಿನ ಪ್ರಮಾಣ.
  6. (ಮನಶ್ಶಾಸ್ತ್ರ) (ಸಂವೇದನೆ ಮೊದಲಾದವುಗಳ ವಿಷಯದಲ್ಲಿ) ಅಧಿಕ ಪ್ರಮಾಣದ; ಬೃಹತ್‍ ಪ್ರಮಾಣದ.
  7. (ಖನಿಜಶಾಸ್ತ್ರ) ಸ್ಫುಟವಾಗಿ ಸ್ಪಟಿಕಾಕಾತಿಯಲ್ಲದ; ಕಣ್ಣಿಗೆ ಕಾಣುವಂತೆ ಸ್ಫಟಿಕಾಕಾರವಲ್ಲದ.
  8. (ಭೂವಿಜ್ಞಾನ) ರಚನಾ ವಿಭಾಗಗಳಿಲ್ಲದ.