See also 2mash  3mash  4mash
1mash ಮ್ಯಾಷ್‍
ನಾಮವಾಚಕ
  1. ಮಾಲ್ಟು; (ಮದ್ಯ ತಯಾರಿಸಲು ಸಿಹಿ ರಸವಾಗಲೆಂದು) ಬಿಸಿನೀರಿನಲ್ಲಿ ಬೆರೆಸಿಟ್ಟ ಮೊಳೆ ಧಾನ್ಯ.
  2. (ಕುದುರೆ ಮೊದಲಾದವುಗಳಿಗೆ ಕೊಡುವ) ಬೇಯಿಸಿದ ಕಾಳು, ತವುಡು, ಮೊದಲಾದವನ್ನು ಬೆರೆಸಿದ ಬೆಚ್ಚನೆಯ ತೀನಿ, ತಿನಿಸು.
  3. (ನೀರು ಮೊದಲಾದವನ್ನು ನೆನಸಿ, ಜಜ್ಜಿ, ಕುಟ್ಟಿ ಯಾ ಅರೆದು, ಮೆತು ಮಾಡಿದ) ನೀರು ಹಿಟ್ಟು; ದ್ರವಪಿಷ್ಟ.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಆಲೂಗಡ್ಡೆಯ ಬಜ್ಜಿ.
  5. ಕಲಬೆರಕೆ.
See also 1mash  3mash  4mash
2mash ಮ್ಯಾಷ್‍
ಸಕರ್ಮಕ ಕ್ರಿಯಾಪದ
  1. ಮಾಲ್ಟಿಗೆ ಬಿಸಿನೀರು – ಬೆರೆಸು, ಸೇರಿಸು.
  2. ಬಜ್ಜಿಯಾಗುವಂತೆ, ನೀರು ಹಿಟ್ಟಾಗುವಂತೆ – ಜಜ್ಜು, ಅರೆ.
  3. (ಆಲೂಗಡ್ಡೆ ಮೊದಲಾದವನ್ನು ಜಜ್ಜಿ) ಬಜ್ಜಿ ಮಾಡು.
See also 1mash  2mash  4mash
3mash ಮ್ಯಾಷ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) (ಅಶಿಷ್ಟ) (ಗಂಡಸು ಹೆಂಗಸನ್ನು ಯಾ ಹೆಂಗಸು ಗಂಡಸನ್ನು) ಮರುಳುಗೊಳಿಸು; ಮೋಹೋದ್ರೇಕಗೊಳಿಸು.

ಪದಗುಚ್ಛ

be mashed on (ಒಬ್ಬನ ಯಾ ಒಬ್ಬಳ ಮೇಲೆ) ಮೋಹಗೊಂಡಿರು; ಮರುಳಾಗಿರು.

See also 1mash  2mash  3mash
4mash ಮ್ಯಾಷ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಮೋಹಗೊಳಿಸಿದವನು ಯಾ ಮೋಹಿಸಿದವಳು; ಮರುಳುಗೊಳಿಸಿದವ ಯಾ ಮರುಳುಗೊಳಿಸಿದವಳು.