marker ಮಾರ್ಕರ್‍
ನಾಮವಾಚಕ
  1. ಗುರುತಿಗ; ಗುರುತುಗಾರ:
    1. ಬೇಟೆಯ ಹಕ್ಕಿ ಅಡಗಿಕೊಂಡಿರುವ ಸ್ಥಳವನ್ನು ಗುರುತಿಟ್ಟುಕೊಳ್ಳುವವ, ನೆನಪಿನಲ್ಲಿಟ್ಟುಕೊಳ್ಳುವವ.
    2. (ಮುಖ್ಯವಾಗಿ ಬಿಲಿಯರ್ಡ್ಸ್‍ ಆಟದಲ್ಲಿ) ಗೆಲ್ಲಂಕದ ಲೆಕ್ಕಗಾರ; ಗೆಲ್ಲಂಕಗಳನ್ನು ಬರೆದಿಡುವವನು.
    3. ದಾಳಿಯಿಡುವ ಸ್ಥಳವನ್ನು ಬೆಳಗಲು ವಿಮಾನದಿಂದ ಕೆಳಕ್ಕೆ ಹಾಕುವ, ದಹ್ಯ ವಸ್ತುವಿರುವ ಕೋಶ.
    4. ಮಾರ್ಕರ್‍; ಅಗಲವಾದ ಹೆಲ್ಟ್‍ ಮೊನೆಯುಳ್ಳ ಪೆನ್ನು, ಲೇಖನಿ.
    5. = bookmark.
    6. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಾಲ ಕೊಟ್ಟವನಿಗೆ ಸಾಲಗಾರನು ಬರೆದುಕೊಡುವ ವಾಗ್ದಾನ ಪತ್ರ, IOU ಪತ್ರ.
  2. ಗುರುತು; ತಲುಪಿದ ಸ್ಥಾನ, ಸ್ಥಳ, ಮೊದಲಾದವನ್ನು ಗುರುತಿಸಲು ಬಳಸುವ ಕಲ್ಲು, ಕಂಬ, ಮೊದಲಾದವು.