lymph ಲಿಂಹ್‍
ನಾಮವಾಚಕ
  1. (ಕಾವ್ಯಪ್ರಯೋಗ) ಶುದ್ಧವಾದ – ನೀರು, ಜಲ.
  2. (ಶರೀರ ವಿಜ್ಞಾನ) ದುಗ್ಧರಸ; ಬಿಳಿದ್ರವ; ಶರೀರದ ಅಂಗಾಂಗಗಳೆಲ್ಲವನ್ನೂ ತೋಯಿಸುವ, ರಕ್ತದ ಪ್ಲಾಸ್ಮದಂತೆ ನಿರ್ವರ್ಣವಾಗಿರುವ ಬಿಳಿಯ ರಕ್ತಕಣಗಳಿರುವ, ದುಗ್ಧನಾಳಗಳ ಮೂಲಕ ಹೋಗಿ ರಕ್ತವನ್ನು ಸೇರುವ ಕ್ಷಾರೀಯ ದ್ರವ.
  3. ಲಸಿಕೆಯಾಗಿ ಬಳಸುವ ಈ ದ್ರವ.
  4. ದುಗ್ಧ ರಸ; ಬಿಳಿದ್ರವ; ಹುಣ್ಣು ಮೊದಲಾದವುಗಳಿಂದ ಜಿನುಗುವ ಬಿಳಿಯ ದ್ರವ.