See also 2lute  3lute
1lute ಲೂ(ಲ್ಯೂ)ಟ್‍
ನಾಮವಾಚಕ

ಲೂಟ್‍ವಾದ್ಯ; 14–17ನೆಯ ಶತಮಾನಗಳ ಅವಧಿಯಲ್ಲಿ ಬಳಕೆಯಲ್ಲಿದ್ದ ಗಿಟಾರ್‍ನಂಥ, ಉದ್ದಕತ್ತಿನ, ಪೇರ್‍ ಹಣ್ಣಿನಂಥ ದೇಹವುಳ್ಳ, ಒಂದು ತಂತಿ ವಾದ್ಯ. Figure: lute

ನುಡಿಗಟ್ಟು

rift in the lute

  1. ಒಪ್ಪಂದಕ್ಕೆ ಕುಂದನ್ನುಂಟುಮಾಡುವಂಥ ಸಣ್ಣದೋಷ; ಅಪಸ್ವರ.
  2. (ಸಾಮಾನ್ಯವಾಗಿ) (ರೂಪಕವಾಗಿ) ಅಂಕುರಿಸುತ್ತಿರುವ ಒಡಕು, ಮನಸ್ತಾಪ, ಹುಚ್ಚು, ಮೊದಲಾದವು.
See also 1lute  3lute
2lute ಲೂ(ಲ್ಯೂ)ಟ್‍
ನಾಮವಾಚಕ

ಅಂಟುಮಣ್ಣು; ತೂತು ಮುಚ್ಚಲು, ಜೋಡಿಸಿರುವ ಸಂದಿನಲ್ಲಿ ಗಾಳಿ ಹೋಗದಂತೆ ಭದ್ರಮಾಡಲು, ಮೂಸೆಯ ಮೇಲೆ ಬಳಿಯಲು, ಕಸಿಕಟ್ಟು ಮೊದಲಾದವುಗಳ ಮೇಲೆ ಮೆತ್ತಲು ಬಳಸುವ, ಒಂದು ಬಗೆಯ ಜೇಡಿ ಮಣ್ಣು.

See also 1lute  2lute
3lute ಲೂ(ಲ್ಯೂ)ಟ್‍
ಸಕರ್ಮಕ ಕ್ರಿಯಾಪದ

ಅಂಟು ಮಣ್ಣು ಹಚ್ಚಿ ಭದ್ರಮಾಡು; ಜೇಡಿಮಣ್ಣು ಮೊದಲಾದವುಗಳನ್ನು ಮೆತ್ತಿ – ಭದ್ರಮಾಡು, ಮುಚ್ಚು.