lunar ಲೂ(ಲ್ಯೂ)ನರ್‍
ಗುಣವಾಚಕ
  1. ಚಾಂದ್ರ; ಚಂದ್ರನ; ಚಂದ್ರನಿಗೆ ಸಂಬಂಧಿಸಿದ; ಚಂದ್ರನಲ್ಲಿಯ; ಚಂದ್ರನಂಥ.
  2. (ಬೆಳಕು, ಯಶಸ್ಸು, ಮೊದಲಾದವುಗಳ ವಿಷಯದಲ್ಲಿ) ಮಸುಕಾದ; ಮಂದ; ಕ್ಷೀಣ; ಪೇಲವ; ಕಾಂತಿಹೀನ; ಪ್ರಕಾಶಮಾನವಲ್ಲದ.
  3. ಅರ್ಧ ಚಂದ್ರಾಕೃತಿಯ; ಬಾಲ ಚಂದ್ರಾಕೃತಿಯ.
  4. (ರಸಾಯನವಿಜ್ಞಾನ) ಬೆಳ್ಳಿಯ; ಬೆಳ್ಳಿಯನ್ನೊಳಗೊಂಡ; ರಜತ.
  5. ಚಂದ್ರಯಾನದ ಯಾ ಚಂದ್ರಯಾನ ಸಂಶೋಧನೆಯ; ಚಂದ್ರನ ಬಳಿಗೆ ಹೋಗುವ ಯಾನದ ಯಾ ತತ್ಸಂಬಂಧವಾದ ಸಂಶೋಧನೆಯ.