lunacy ಲೂನಸಿ
ನಾಮವಾಚಕ
(ಬಹುವಚನ lunacies).
  1. ಹುಚ್ಚು; ಮರುಳು; ಬುದ್ಧಿವಿಕಲ್ಪ; ಬುದ್ಧಿಭ್ರಮಣೆ; ಉನ್ಮಾದ; ಬುದ್ಧಿ ಸ್ತಿಮಿತದಲ್ಲಿಲ್ಲದಿರುವುದು.
  2. (ನ್ಯಾಯಶಾಸ್ತ್ರ) (ಪ್ರಜಾ ಹಕ್ಕುಗಳಿಗೂ ವ್ಯವಹಾರಕ್ಕೂ ಅಡ್ಡಿಯಾಗುವಂತಹ) ಮತಿಭ್ರಮಣೆ; ಬುದ್ಧಿವಿಕಲ್ಪ.
  3. ದೊಡ್ಡ ಪ್ರಮಾದ; ದೊಡ್ಡ ಅವಿವೇಕ; ಹುಚ್ಚು ಕೆಲಸ; ಹುಚ್ಚಾಟ.
ಪದಗುಚ್ಛ
  1. Commission of lunacy (ಬ್ರಿಟಿಷ್‍ ಪ್ರಯೋಗ) ಹುಚ್ಚು ತನಿಖೆ ಅಧಿಕಾರ; ಉನ್ಮಾದ ಪರೀಕ್ಷಾಧಿಕಾರ; ಒಬ್ಬನಿಗೆ ಹುಚ್ಚಿದೆಯೇ ಇಲ್ಲವೇ ಎಂದು ವಿಚಾರಣೆ ಮಾಡಲು ಕೊಟ್ಟ ಅಧಿಕಾರ.
  2. Commissioner in lunacy (ಬ್ರಿಟಿಷ್‍ ಪ್ರಯೋಗ) ಹುಚ್ಚಾಸ್ಪತ್ರೆಗಳ ವಿಚಾರಣಾ ಮಂಡಲಿಯ ಹತ್ತು ಸದಸ್ಯರಲ್ಲಿ ಒಬ್ಬ.
  3. Master in lunacy (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಉನ್ಮಾದ ಪರೀಕ್ಷಕ; ಹುಚ್ಚು ತನಿಖೆಗಾರ; ಆರೋಪಿಸಿರುವ ಹುಚ್ಚನ್ನು ತನಿಖೆ ಮಾಡುವ ಅಧಿಕಾರಿ.