luminous ಲೂ(ಲ್ಯೂ)ಮಿನಸ್‍
ಗುಣವಾಚಕ
  1. ಬೆಳಕು ಸೂಸುವ; ಪ್ರಕಾಶಕ.
  2. ಬೆಳಕು ತುಂಬಿದ; ಬೆಳಗುವ; ಹೊಳೆಯುವ; ಪ್ರಕಾಶಿಸುವ.
  3. (ಬರಹಗಾರರು ಮೊದಲಾದವರ ವಿಷಯದಲ್ಲಿ) ಒಂದು ವಿಷಯದ ಮೇಲೆ ಬೆಳಕು ಚೆಲ್ಲುವ; ವಿಷಯವನ್ನು ಸ್ಪಷ್ಟಗೊಳಿಸುವ.
  4. ನಿಶಾಗೋಚರ; ಕತ್ತಲಲ್ಲಿ ಕಾಣುವ: luminous paint ಕತ್ತಲಲ್ಲಿ ಕಾಣುವ ಬಣ್ಣ.
  5. ಬೆಳಗುವ; ದೀಪ್ತ: luminous radiation ದೀಪ್ತ ವಿಕಿರಣ.
ಪದಗುಚ್ಛ

luminous paint ಬೆಳಗು ಬಣ್ಣ; ದೀಪ್ತಿವರ್ಣ; ಒಂದು ವಸ್ತು ರಾತ್ರಿಯಲ್ಲಿ ಬೆಳಗುವಂತೆ ಕಾಣಲು ಅದಕ್ಕೆ ಬಳಿದ ಸ್ಫುರದೀಪ್ತಿಯ ತೇಜೋಮಯ ವರ್ಣ.