luminary ಲೂಮಿನರಿ
ನಾಮವಾಚಕ

(ಬಹುವಚನ luminaries).

  1. (ಸಾಹಿತ್ಯಕ) ಜ್ಯೋತಿ; ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಬೆಳಕು ಕೊಡುವ ವಸ್ತು, ಮುಖ್ಯವಾಗಿ ಸೂರ್ಯ, ಚಂದ್ರ.
  2. ಜ್ಯೋತಿ; ಜ್ಞಾನನಿಧಿ; ಧರ್ಮಜ್ಯೋತಿ; ಬೌದ್ಧಿಕ ಜ್ಞಾನದ ಯಾ ನೈತಿಕ ಸ್ಫೂರ್ತಿಯ ಆಕರವೆಂದು ಯಾ ಬೌದ್ಧಿಕವಾಗಿ, ಧಾರ್ಮಿಕವಾಗಿ ಯಾ ಆಧ್ಯಾತ್ಮಿಕವಾಗಿ ಬಹಳ ಪ್ರಭಾವ ಹೊಂದಿರುವನೆಂದು ಪರಿಗಣಿತನಾದ ವ್ಯಕ್ತಿ.
  3. ಪ್ರತಿಭಾಶಾಲಿ; ಪ್ರಭಾವಶಾಲಿ: a host of show business luminaries ನಾಟಕವೃತ್ತಿಯ ಪ್ರತಿಭಾಶಾಲಿಗಳ ತಂಡ.