See also 2lumber  3lumber
1lumber ಲಂಬರ್‍
ಅಕರ್ಮಕ ಕ್ರಿಯಾಪದ

ಶಬ್ದಮಾಡುತ್ತಾ ಅಡ್ಡಾದಿಡ್ಡಿಯಾಗಿ ತಡವರಿಸುತ್ತ ನಡೆ; ಒಡ್ಡೊಡ್ಡಾಗಿ ಚಲಿಸು, ನಡೆ.

See also 1lumber  3lumber
2lumber ಲಂಬರ್‍
ನಾಮವಾಚಕ
  1. (ಸ್ಥಳವನ್ನು ಆಕ್ರಮಿಸಿ ಬಿದ್ದಿರುವ) ಹಳೆಪಳೆ ಸಾಮಾನುಗಳು; ಹೊರೆಯಾಗಿ ಬಿದ್ದಿರುವ ನಿರುಪಯುಕ್ತ ಹಳೆಯ ಪೀಠೋಪಕರಣ ಮೊದಲಾದವು.
  2. (ಅಮೆರಿಕನ್‍ ಪ್ರಯೋಗ) (ಪೂರ್ತಿ ಸರಿಯಾಗಿ ಕೆತ್ತಿರದ ಯಾ ಅರೆಕೆತ್ತಿದ) ಮರದ ದಿಮ್ಮಿ; ನಾಟ.
  3. ನಿರುಪಯುಕ್ತ ಯಾ ಬೇಕಿಲ್ಲದ ಹೊರೆಯಾದ ವಸ್ತುಗಳು.
See also 1lumber  2lumber
3lumber ಲಂಬರ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ವ್ಯಕ್ತಿ ಮೊದಲಾದವರ ಮೇಲೆ) ಬೇಕಿಲ್ಲದ ಯಾ ಅಹಿತವಾದ ಹೊರೆ ಹೇರು: lumbering me with the job of finding accommodation for the whole party ಇಡೀ ತಂಡಕ್ಕೆ ವಸತಿ ಹುಡುಕಿಡುವ ಕೆಲಸದ ಹೊರೆಯನ್ನು ನನ್ನ ಮೇಲೆ ಹೇರಿ.
  2. (ಕೊಠಡಿ, ಸ್ಥಳ, ಮೊದಲಾದವನ್ನು) ಅನನುಕೂಲವಾಗುವಂತೆ, ಅಡ್ಡಿಯಾಗುವಂತೆ (ಸಾಮಾನು ಮೊದಲಾದವುಗಳಿಂದ) – ತುಂಬು, ಅಡಚು: a room lumbered up with junk ನಿರುಪಯುಕ್ತ ವಸ್ತುಗಳಿಂದ ತುಂಬಿದ ಕೊಠಡಿ. mind lumbered up with useless facts ನಿರುಪಯುಕ್ತ ಸಂಗತಿಗಳಿಂದ ಭರ್ತಿಯಾದ ಬುದ್ಧಿ.
  3. (ವ್ಯವಸ್ಥೆಯಿಲ್ಲದೆ) ರಾಶಿ ಹಾಕು; ಒಟ್ಟು; ಗುಡ್ಡೆ ಹಾಕು.
ಅಕರ್ಮಕ ಕ್ರಿಯಾಪದ

ಕಾಡಿನ ಮರವನ್ನು ಕತ್ತರಿಸಿ, ಕೆತ್ತಿ, ಸರಿ ಮಾಡು; ಚೌಬೀನೆ ತಯಾರಿಸು.