See also 2luff
1luff ಲಹ್‍
ನಾಮವಾಚಕ
  1. (ನೌಕಾಯಾನ)
    1. ಕೂವೆಯ ಪಕ್ಕದ ಭಾಗ.
    2. ಹಡಗಿನ ಉದ್ದ ಸಾಲಿನ ಹಾಯಿಪಟದ – ಪಕ್ಕ, ಭಾಗ.
  2. (ಬ್ರಿಟಿಷ್‍ ಪ್ರಯೋಗ) ಹಡಗಿನ ಪಕ್ಕಗಳು ಒಳಮುಖವಾಗಿ ಬಾಗಲು ಪ್ರಾರಂಭಿಸುವ, ಅದರ ಮುಂಭಾಗದ ಯಾ ಮುಂಗೋಟಿನ ಅತಿ ಅಗಲವಾದ ಜಾಗ.
See also 1luff
2luff ಲಹ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ಗಾಳಿಗೆ ಹತ್ತಿರವಾಗುವಂತೆ ಹಡಗನ್ನು ನಡೆಸು.
  2. (ಹಡಗಿನ ಮುಂಗೋಟು) ಗಾಳಿಗೆ ಹತ್ತಿರವಾಗುವಂತೆ ಹಡಗಿನ ಚುಕ್ಕಾಣಿ ತಿರುಗಿಸು.
  3. (ದೋಣಿ ಪಂದ್ಯದಲ್ಲಿ ಪ್ರತಿಸ್ಪರ್ಧಿ ದೋಣಿಯ) ಗಾಳಿ (ಬೀಸುವ) ಪಕ್ಕಕ್ಕೆ ಹೋಗಿ ಅವನಿಗೆ ಅಡ್ಡಿಯುಂಟುಮಾಡು.
  4. (ಕ್ರೇನ್‍ನ ಯಾ ಡೆರಿಕ್‍ನ) ಚಾಚುತೋಳನ್ನು ಎತ್ತು ಯಾ ಇಳಿಸು.