lucubration ಲೂಕ್ಯುಬ್ರೇಷನ್‍
ನಾಮವಾಚಕ

(ಸಾಹಿತ್ಯಕ)

  1. ಇರುಳೋದು; ನಿಶಾಧ್ಯಯನ; ರಾತ್ರಿ ವ್ಯಾಸಂಗ; ನಿದ್ದೆಗೆಟ್ಟು ಮಾಡುವ ವ್ಯಾಸಂಗ.
  2. ರಾತ್ರಿ ಧ್ಯಾನ; ನಿಶಾಚಿಂತನೆ; ರಾತ್ರಿ ಹೊತ್ತು ಮಾಡುವ ಚಿಂತನೆ, ಆಲೋಚನೆ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಪ್ರಯಾಸ ಸಾಹಿತ್ಯ; ಮುಖ್ಯವಾಗಿ ಆಡಂಬರದ ಯಾ ಬಹು ಪ್ರಯಾಸಪಟ್ಟು ಬರೆದ ಸಾಹಿತ್ಯ ಕೃತಿ.