luck ಲಕ್‍
ನಾಮವಾಚಕ
  1. (ಒಳ್ಳೆಯ, ಕೆಟ್ಟ) ಅದೃಷ್ಟ; ಯೋಗ; ಹಣೆಯ ಬರಹ; ವಿಧಿ; ನಸೀಬು:
    1. ವ್ಯಕ್ತಿಯ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು.
    2. ವ್ಯಕ್ತಿಯ ಸುಯೋಗ ಯಾ ದುರದೃಷ್ಟಕ್ಕೆ ಒಳಗಾಗುವ ಸಹಜ ಪ್ರವೃತ್ತಿ.
    3. ಅದೃಷ್ಟದ ಯಾ ದುರದೃಷ್ಟದ ಸರಮಾಲೆಯನ್ನು ತರುತ್ತದೆಯೆಂದು ನಂಬಲಾಗಿರುವ ಆಕಸ್ಮಿಕದ ಪ್ರಕ್ರಿಯೆ.
  2. ಸುಯೋಗ; ಸುದೈವ; ಭಾಗ್ಯ: have the lock to succeed ಗೆಲ್ಲುವ ಭಾಗ್ಯ ಪಡೆದಿರು.
ಪದಗುಚ್ಛ
  1. bad luck to him (ಯಾರನ್ನಾದರೂ ಸಿಟ್ಟಿನಿಂದ ಶಪಿಸುವಾಗ) ಅವನಿಗೆ ಕೇಡು ತಟ್ಟಲಿ; ಅವನು ಹಾಳಾಗಲಿ.
  2. for luck ಒಳ್ಳೆಯ ಅದೃಷ್ಟಕ್ಕಾಗಿ.
  3. good luck
    1. ಸುಯೋಗ; ಒಳ್ಳೆಯ ಅದೃಷ್ಟ.
    2. ಅದೃಷ್ಟ ಖುಲಾಯಿಸಲಿ; ಸುಯೋಗ ಬರಲಿ (ಎಂದು ಹಾರೈಸುವ ಮಾತು).
  4. hard luck ಒಬ್ಬನಿಗೆ ಸಲ್ಲಬೇಕಾದುದಕ್ಕಿಂತ ಕೆಟ್ಟ ಅದೃಷ್ಟ; (ಒಬ್ಬನ) ದುರದೃಷ್ಟ.
  5. have no luck ಅದೃಷ್ಟವಿಲ್ಲದೆ ಹೋಗು; ಅದೃಷ್ಟವಂತನಲ್ಲದಿರು.
  6. in luck ಸುಯೋಗದಲ್ಲಿ.
  7. no such luck (ಆಡುಮಾತು) ಅಂಥ ಅದೃಷ್ಟವಿಲ್ಲ; ದುರದೃಷ್ಟದಿಂದ ಹಾಗೆ, ಅಂತೆ ಆಗಲಿಲ್ಲ.
  8. out of luck ಅದೃಷ್ಟಹೀನನಾ(ಳಾ)ಗಿ.
  9. try one’s luck (ಜೂಜಾಟ ಯಾ ಯಾವುದೇ ಕೆಲಸ ಮೊದಲಾದವಲ್ಲಿ) ಅದೃಷ್ಟ – ಪರೀಕ್ಷಿಸು, ನೋಡಿಬಿಡು; (ತನ್ನ) ಹಣೆಬರಹ ಹೇಗಿದೆ ಎಂದು ಪರೀಕ್ಷಿಸಿಬಿಡು.
  10. with luck ಅದೃಷ್ಟವಿದ್ದಲ್ಲಿ; ಎಲ್ಲವೂ ಸರಿಯಾಗಿ ನಡೆದರೆ, ಆದರೆ, ಸಂಭವಿಸಿದರೆ.
  11. worse luck ದುರ್ದೈವದಿಂದ; ದುರದೃಷ್ಟವಶಾತ್‍: worse luck, I was not one of them ದುರ್ದೈವದಿಂದ, ನಾನು ಅವರ ಪೈಕಿ ಒಬ್ಬನಾಗಿರಲಿಲ್ಲ.
ನುಡಿಗಟ್ಟು
  1. as luck would have it ಅದೃಷ್ಟವಶಾತ್‍; ಅದೃಷ್ಟದಿಂದ:
    1. ಒಳ್ಳೆಯ ಅದೃಷ್ಟದಿಂದ; ಸುದೈವದಿಂದ.
    2. ದುರದೃಷ್ಟದಿಂದ; ದುರ್ದೈವವಶಾತ್‍.
  2. down on one’s luck
    1. ದುರದೃಷ್ಟದಿಂದ ಎದೆಗುಂದಿ.
    2. ತಾತ್ಕಾಲಿಕವಾಗಿ ದುರದೃಷ್ಟಕ್ಕೆ – ಸಿಕ್ಕಿ, ಗುರಿಯಾಗಿ.
  3. just my luck ಎಂದಿನಂತೆಯೇ (ನನ್ನ) ದುರದೃಷ್ಟ; ನನ್ನ ಅದೃಷ್ಟವೇ ಅಷ್ಟು.