lozenge ಲಾಸಿಂಜ್‍
ನಾಮವಾಚಕ
  1. ಸಮಬಾಹು ಚತುರ್ಭುಜ.
  2. ವಜ್ರಾಕೃತಿ.
  3. (ವಂಶಲಾಂಛನ ವಿದ್ಯೆ) (ಅವಿವಾಹಿತ ಕನ್ಯೆಯ ಯಾ ವಿಧವೆಯ ವಂಶಲಾಂಛನ ಚಿಹ್ನೆಗಳನ್ನು ಹಾಕಿರುವ) ವಜ್ರಾಕೃತಿಯ ಗುರಾಣಿ.
  4. (ಕಡೆದ ರತ್ನಮಣಿಯ) ವಜ್ರಾಕಾರದ – ಪಾರ್ಶ್ವ, ಮುಖ, ಮೈ.
  5. (ಮೊದಲು ವಜ್ರಾಕೃತಿಯಲ್ಲಿರುತ್ತಿದ್ದ, ಬಾಯಲ್ಲಿಟ್ಟರೆ ಕರಗಿಹೋಗುವ) ಒಂದು ರೀತಿಯ ಬತ್ತಾಸು, ಮಿಠಾಯಿ, ಸಕ್ಕರೆಯ ಅಚ್ಚು, ಔಷಧಿಯ ಗುಳಿಗೆ, ಮೊದಲಾದವು.
  6. ಕಿಟಕಿಯ(ಲ್ಲಿಯ) ವಜ್ರಾಕೃತಿಯ ಗಾಜು ಹಲಗೆ.