lover ಲವರ್‍
ನಾಮವಾಚಕ
  1. ಪ್ರಿಯ(ಯೆ); ಪ್ರಿಯತಮ(ಮೆ); ನಲ್ಲ(ಲ್ಲೆ); ಇನಿಯ(ಯೆ); ಪ್ರೇಮಿ; ಪ್ರಣಯಿ: it was a lover and his lass ಒಬ್ಬ ಪ್ರಿಯ, ಅವನ ಪ್ರಿಯತಮೆ.
  2. (ಬಹುವಚನದಲ್ಲಿ) ಇನಿಯ ಇನಿಯೆಯರು; ನಲ್ಲನಲ್ಲೆಯರು; ಪ್ರೇಮಿದ್ವಂದ್ವ; ಪ್ರೇಮಿದ್ವಯ.
  3. ಮಿಂಡ; ವಿಟ; ಜಾರ; ಇಟ್ಟುಕೊಂಡವನು.
  4. ಸ್ತ್ರೀಲೋಲ; ಸ್ತ್ರೀಪರಾಯಣ.
  5. (ವಸ್ತುವಿನ, ಕಾರ್ಯದ, ಅಭಿಪ್ರಾಯ, ಮೊದಲಾದವುಗಳ) ಮೆಚ್ಚುಗ; ಅಭಿಮಾನಿ; ಭಕ್ತೆ(ಕ್ತ); ಪ್ರೇಮಿ: a lover of music ಸಂಗೀತ ಪ್ರೇಮಿ.