louvre ಲೂವರ್‍
ನಾಮವಾಚಕ
  1. ಕಿಂಡಿಗುಮ್ಮಟ; ಕಿಂಡಿಗೋಪುರ; (ಕಟ್ಟಡಗಳ ಮಧ್ಯಾಂಗಣದ ಮೇಲ್ಚಾವಣಿ ಮೊದಲಾದವುಗಳಲ್ಲಿ ಹೊಗೆ ಹೊರಗೆ ಹೋಗುವುದಕ್ಕೂ ಗಾಳಿ ಒಳಕ್ಕೆ ಬರುವುದಕ್ಕೂ ಪಕ್ಕಗಳಲ್ಲಿ ಕಂಡಿ ಮಾಡಿರುವ) ಗುಮ್ಮಟದಾಕಾರದ ಗೋಪುರ.
  2. (ಬಹುವಚನದಲ್ಲಿ) ಪಟ್ಟಿವರಿಸೆ; (ಗಾಳಿ ಆಡುವಂತೆಯೂ ಮಳೆಯ ನೀರು ಒಳಗೆ ಸುರಿಯದಂತೆಯೂ) ಒಂದರ ಮೇಲೊಂದು ಇಳಿಜಾರಾಗಿ ಪೇರಿಸಿರುವ ಹಲಗೆಗಳು ಯಾ ಗಾಜುಪಟ್ಟಿಗಳು.