lordship ಲಾರ್ಡ್‍ಷಿಪ್‍
ನಾಮವಾಚಕ
  1. ಆಧಿಪತ್ಯ; ಅಧಿಕಾರ; ಆಳಿಕೆ; ಒಡೆತನ; ಪ್ರಭುತ್ವ; ಯಜಮಾನಿಕೆ; ಸ್ವಾಮ್ಯ.
  2. ಆಳ್ವಿಕೆಯ ಪ್ರಾಂತ; ಅಧಿಕಾರ ಪ್ರದೇಶ.
  3. ಜಹಗೀರು; ಜಮೀನು ದಾರಿ; ಜಮೀನು; ಭೂಸ್ವತ್ತು.
  4. ಶ್ರೀಮಂತತ್ವ; ಶ್ರೀಮಂತನಾಗಿರುವಿಕೆ: your lordship (ಗೌರವಪೂರ್ವಕವಾಗಿ ಶ್ರೀಮಂತನನ್ನು ಕುರಿತು ಮಾತನಾಡುವಲ್ಲಿ) ನೀವು; ತಾವು; ದೊರೆಗಳು; ಧಣಿಗಳು; ಒಡೆಯರು; ಬುದ್ಧಿಯವರು (ಹಾಸ್ಯ ಪ್ರಯೋಗ ಇತರರನ್ನು ಯಾ ಪ್ರಾಣಿಗಳನ್ನು ಕುರಿತು ಹೇಳುವಾಗಲೂ ಸಹ).
  5. (ಸಾಮಾನ್ಯವಾಗಿ Lordship) ಲಾರ್ಡ್‍, ನ್ಯಾಯಾಧೀಶ, ಯಾ ಬಿಷಪ್ಪನ ದರ್ಜೆಯವನನ್ನು ಸಂಬೋಧಿಸುವಾಗ ಹೇಳುವ ಬಿರುದು: Your Lordship, His Lordship.