lordly ಲಾರ್ಡ್‍ಲಿ
ಗುಣವಾಚಕ
( ತರರೂಪ Lordlier, ತಮರೂಪ lordliest).
  1. ಸೊಕ್ಕಿನ; ಗರ್ವದ; ಪ್ರತಿಷ್ಠೆಯ; ಶ್ರೀಮದ್ಗಾಂಭೀರ್ಯದ; ದರ್ಪದ; ಉದ್ಧತ; ದುರಹಂಕಾರದ; ಅಹಂಭಾವದ: a lordly indifference to making money by his writings ತನ್ನ ಬರಹಗಳಿಂದ ಹಣ ಗಳಿಸುವ ವಿಚಾರದಲ್ಲಿ ಸೊಕ್ಕಿನ ಅಸಡ್ಡೆ.
  2. ನಿರ್ಲಕ್ಷ್ಯದ; ಅಸಡ್ಡೆಯ; ಕಡೆಗಣಿಸುವ; ಉಪೇಕ್ಷೆಯ; ತಿರಸ್ಕಾರ ತೋರುವ.
  3. ವೈಭವದ; ಸೊಗಸಾದ; ಭರ್ಜರಿ; ಬಹುಠೀವಿಯ; ಭವ್ಯ: one of the lordliest of sites ಅತ್ಯಂತ ಭರ್ಜರಿ ನಿವೇಶನಗಳಲ್ಲೊಂದು.
  4. ಶ್ರೀಮಂತ ಯೋಗ್ಯ; ಶ್ರೀಮಂತನಿಗೆ ತಕ್ಕ; ಶ್ರೀಮಂತೋಚಿತ.
  5. ಶ್ರೀಮಂತನ; ಶ್ರೀಮಂತನಿಗೆ ಸೇರಿದ.