loosish ಲೂಸಿಷ್‍
ಗುಣವಾಚಕ
  1. ಕೊಂಚಮಟ್ಟಿಗೆ ಕಳಚಿದ; ತುಸು ಕಳಚಬಲ್ಲ.
  2. ಸ್ವಲ್ಪಮಟ್ಟಿಗೆ (ಒಂದು ಭಾಗ ಕಟ್ಟಿಲ್ಲದೆ) ಜೋಲಾಡುವ.
  3. ಕೊಂಚ ಸಡಿಲವಾದ; ಸ್ವಲ್ಪ – ಡೀಲಾ ಆಗಿರುವ, ಬಿಗುವಿಲ್ಲದ, ಭದ್ರವಿಲ್ಲದ.
  4. ಕೊಂಚಮಟ್ಟಿಗೆ – ಒತ್ತಾಗಿಲ್ಲದ, ಸಾಂದ್ರವಿಲ್ಲದ, ವಿರಳವಾದ.
  5. (ಹೇಳಿಕೆ ಮೊದಲಾದವುಗಳ ವಿಷಯದಲ್ಲಿ) ಅಷ್ಟೊಂದು ಕರಾರುವಾಕ್ಕಲ್ಲದ; ಅಷ್ಟು ನಿಷ್ಕೃಷ್ಟವಲ್ಲದ; ಅಷ್ಟು ಖಚಿತವಲ್ಲದ.
  6. (ಭಾಷಾಂತರ) ಸ್ವಲ್ಪ ಮಟ್ಟಿಗೆ ಯಥಾಮೂಲವಲ್ಲದ; ಅಷ್ಟೊಂದು ಯಥಾವತ್ತಾಗಿಲ್ಲದ.
  7. (ಶೈಲಿ) ಸ್ವಲ್ಪಮಟ್ಟಿಗೆ ವ್ಯಾಕರಣ ಶುದ್ಧವಲ್ಲದ.
  8. (ಕರ್ತನ ವಿಷಯದಲ್ಲಿ) ಸ್ವಲ್ಪಮಟ್ಟಿಗೆ ಹರುಕು ಮುರುಕು ಕೆಲಸ ಮಾಡುವ; ಕೊಂಚಮಟ್ಟಿಗೆ ಕ್ರಮ, ಶಿಸ್ತು ಯಾ ವ್ಯವಸ್ಥೆಯಿಲ್ಲದೆ ಕೆಲಸ ಮಾಡುವ.
  9. ಕೊಂಚ ಸಡಿಲ ನೀತಿಯ; ಸ್ವಲ್ಪ ನೀತಿಗೆಟ್ಟ; ಕೊಂಚ ವಿಷಯ ಲಂಪಟನಾದ.
  10. ಕೊಂಚಮಟ್ಟಿಗೆ (ಮಾತಿನಲ್ಲಿ ಯಾ ಕೃತಿಯಲ್ಲಿ) ಹಿಡಿತವಿಲ್ಲದ; ಕೊಂಚ ಸಂಯಮರಹಿತ.
  11. (ಉಡುಪು) ಸ್ವಲ್ಪ ಅಳ್ಳಕವಾದ; ಕೊಂಚ ಸಡಿಲವಾಗಿರುವ.