loosen ಲೂಸನ್‍
ಸಕರ್ಮಕ ಕ್ರಿಯಾಪದ
  1. (ನಾಲಿಗೆ) ಸಡಿಲಬಿಡು.
  2. ಸಡಿಲಗೊಳಿಸು; ಸಡಿಲಮಾಡು; ಬಿಗಿ ಕುಗ್ಗಿಸು; ಬಿಗಿ ಕಡಮೆ ಮಾಡು; ಅಳ್ಳಕ ಮಾಡು.
  3. ವಿರಳ ಮಾಡು; ದಟ್ಟತೆಯನ್ನು ಕಡಮೆಗೊಳಿಸು.
  4. ಮಲಬದ್ಧತೆ ಕಳೆ; ಮಲವಿಸರ್ಜಿಸು.
  5. ಒಣ ಕೆಮ್ಮಲನ್ನು ಹೋಗಿಸು; ಒಣಗೆಮ್ಮಲನ್ನು ತಪ್ಪಿಸಿ, ಶ್ಲೇಷ್ಮ ಬರುವಂತೆ ಮಾಡು.
  6. (ಶಿಸ್ತು ಮೊದಲಾದವನ್ನು) ಸಡಿಲಿಸು; ಸಡಿಲಗೊಳಿಸು.
ಅಕರ್ಮಕ ಕ್ರಿಯಾಪದ
  1. ಸಡಿಲವಾಗು; ಅಳ್ಳಕವಾಗು.
  2. ವಿರಳವಾಗು; ಸಾಂದ್ರತೆ, ಬಿಗಿ – ಕಡಮೆಯಾಗು.
ಪದಗುಚ್ಛ

loosen up = 4limber up.

ನುಡಿಗಟ್ಟು

loosen person’s tongue ವ್ಯಕ್ತಿಯನ್ನು ನಿರಾಳವಾಗಿ, ಯಾವ ನಿರ್ಬಂಧವೂ ಇಲ್ಲದೆ ಮಾತನಾಡುವಂತೆ ಮಾಡು.