lookout ಲುಕೌಟ್‍
ನಾಮವಾಚಕ
  1. ಕಾವಲು; ಉಸ್ತುವಾರಿ; ನಿಗಾವಣೆ; ಕಣ್ಣಿಟ್ಟಿರುವುದು; ಎಚ್ಚರಿಕೆಯಿಂದ ನೋಡುವುದು: keep a good look ಚೆನ್ನಾಗಿ ನಿಗವಿಟ್ಟಿರು, ಕಣ್ಣಿಟ್ಟು ನೋಡುತ್ತಿರು. on the look for bargains ಅಗ್ಗದ ವ್ಯಾಪಾರದ ಮೇಲೆ ನಿಗಾ ಇಟ್ಟಿರು.
  2. ಕಾವಲು ಠಾಣೆ; ವೀಕ್ಷಣ ಸ್ಥಾನ; ಕಾಯುತ್ತಿರುವ ಸ್ಥಳ.
  3. ಕಾವಲಿಗಾಗಿ ಹಾಕಿದ – ವ್ಯಕ್ತಿ, ತಂಡ ಯಾ ದೋಣಿ.
  4. ಭೂಪ್ರದೇಶದ – ದೃಶ್ಯ, ನೋಟ: the look from the summit was lovely ಶಿಖರದಿಂದ ಕಾಣಿಸಿದ ದೃಶ್ಯ ಸುಂದರವಾಗಿತ್ತು.
  5. ಅದೃಷ್ಟದ ಸಂಭವ, ನಿರೀಕ್ಷೆ: it’s a bad look for him ಅವನಿಗೆ ದುರದೃಷ್ಟ ಸಂಭವಿಸುವಂತಿದೆ.
  6. ಪಾಡು; ಕೆಲಸ; ಹೊಣೆ; ಜವಾಬ್ದಾರಿ; ವ್ಯಕ್ತಿಗೆ – ಸೇರಿದ್ದು, ಸಂಬಂಧಪಟ್ಟದ್ದು: that is his look ಅದು ಅವನ ಜವಾಬ್ದಾರಿ; ಅದು ಅವನೇ ಮಾಡಿ ಮುಗಿಸಬೇಕಾದ ಕೆಲಸ.