lone ಲೋನ್‍
ಗುಣವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಏಕಾಂಗಿಯಾದ; ಏಕಾಕಿಯಾದ; ಒಂಟಿಯಾದ; ಒಡನಾಡಿಯಿಲ್ಲದ; ಒಬ್ಬೊಂಟಿಗನಾದ; ಸಂಗಾತಿಗಳು ಯಾ ಬೆಂಬಲಿಗರು ಇಲ್ಲದ.
  2. ಏಕಾಂತ(ವಾದ); ನಿರ್ಜನ; ವಿಜನ; ವಿವಿಕ್ತ; ಜನಶೂನ್ಯ; ಜನರಹಿತ; ಜನಸಂಚಾರವಿಲ್ಲದ; ಜನವಸತಿಯಿಲ್ಲದ.
  3. (ಗೆಳೆಯರು ಯಾ ಸಂಗಾತಿಗಳಿಲ್ಲದೆ) ಏಕಾಂಗಿಭಾವದ; ಏಕಾಕಿಯೆನ್ನಿಸುವ; ಒಂಟಿತನದ.
  4. (ಹೆಂಗಸಿನ ವಿಷಯದಲ್ಲಿ) ಒಂಟಿಯಾದ; ಮದುವೆಯಿಲ್ಲದೆ ಒಬ್ಬೊಂಟಿಗಳಾದ ಯಾ ವಿಧವೆಯಾದ.
  5. ಒಂಟಿಯೆಂಬ ಭಾವನೆಯ, ಭಾವನೆ ಹುಟ್ಟಿಸುವ; ಖಿನ್ನನಾದ.