logic ಲಾಜಿಕ್‍
ನಾಮವಾಚಕ
  1. ತರ್ಕ; ತರ್ಕಶಾಸ್ತ್ರ; ವಿಚಾರ, ವಾದ, ಸ್ವರೂಪಗಳನ್ನು ವಿವೇಚಿಸಿ ವಿವರಿಸುವ ಶಾಸ್ತ್ರ.
  2. (ಯಾವುದೇ) ತರ್ಕ ಪದ್ಧತಿ; ತಾರ್ಕಿಕ ವಿಧಾನ; ತರ್ಕ ವಿಧಾನ.
  3. ತರ್ಕ ಸರಣಿ; ತರ್ಕಪ್ರಕ್ರಿಯೆ; ವಾದಸರಣಿ: I don’t follow your logic ನಿನ್ನ ವಾದಸರಣಿ ನನಗೆ ಅರ್ಥವಾಗಿಲ್ಲ.
  4. ತರ್ಕ ಪ್ರಯೋಗ; ವಾದದ ಯಾ ವಿಚಾರದ ಸರಿಯಾದ ಯಾ ತಪ್ಪಾದ ಬಳಕೆ: your logic is flawed ನಿನ್ನ ತರ್ಕ ದೋಷಪೂರಿತವಾದದ್ದು.
  5. ತರ್ಕನೈಪುಣ್ಯ; ತರ್ಕಶಕ್ತಿ; ತಾರ್ಕಿಕ ಸಾಮರ್ಥ್ಯ; ವಾದ – ಚಾತುರ್ಯ, ಕೌಶಲ: argues with great learning and logic ವಿದ್ವತ್ಪೂರ್ಣವಾಗಿಯೂ ತರ್ಕಕೌಶಲದಿಂದಲೂ ವಾದಿಸುತ್ತಾನೆ.
  6. ತರ್ಕ; ವಾದಗಳು; ವಾದಾವಳಿ; ವಾದಸಮುಚ್ಚಯ: is not governed by logic ತರ್ಕಬದ್ಧವಾಗಿಲ್ಲ; ನ್ಯಾಯಸಮ್ಮತವಾಗಿಲ್ಲ.
  7. ಬಲಾತ್ಕಾರ; ಒತ್ತಾಯ; ಪರಿವರ್ತನ ಸಾಮರ್ಥ್ಯ; ಬದಲಾವಣೆಗೊಳಿಸುವ ಶಕ್ತಿ: the logic of events ಘಟನೆಗಳ ಒತ್ತಾಯ. the logic of necessity ಅನಿವಾರ್ಯತೆಯ ಬಲಾತ್ಕಾರ. the logic of war ಯುದ್ಧದ ಒತ್ತಾಯ.
  8. (ವಾದ, ನಿರ್ಣಯ, ಮೊದಲಾದವುಗಳ) ಅವಶ್ಯ – ಫಲ, ಪರಿಣಾಮ.
    1. ತರ್ಕವ್ಯವಸ್ಥೆ; ಕಂಪ್ಯೂಟರಿನಲ್ಲಿ ಯಾ ಇಲೆಕ್ಟ್ರಾನಿಕ್‍ ಸಾಧನದಲ್ಲಿ ಒಂದು ನಿರ್ದಿಷ್ಟ ಕಾರ್ಯ ನಿರ್ವಹಿಸಲು ಏರ್ಪಾಡು ಮಾಡಿದ ವ್ಯವಸ್ಥೆ ಯಾ ವ್ಯವಸ್ಥೆಯ ಹಿಂದಿರುವ ತತ್ತ್ವಗಳು.
    2. (ಸಾಮೂಹಿಕವಾಗಿ) ತಾರ್ಕಿಕ – ಕ್ರಿಯೆಗಳು, ಚಟುವಟಿಕೆಗಳು, ಕಾರ್ಯಾಚರಣೆಗಳು.