loggerhead ಲಾಗರ್‍ಹೆಡ್‍
ನಾಮವಾಚಕ
  1. ಚೆಂಡು – ಕೋಲು, ಸೌಟು; ಕಲ್ಲರಗು, ಡಾಂಬರು, ಮೊದಲಾದವನ್ನು ಕರಗಿಸಲು ಬಳಸುವ, ಕಾಯಿಸಿದ ತುದಿಗುಂಡಿರುವ, ಉದ್ದ ಹಿಡಿಯ ಕಬ್ಬಿಣದ ಸಲಕರಣೆ.
  2. ದಪ್ಪತಲೆಗ; ಪೀನಶೀರ್ಷಿ:
    1. ದೊಡ್ಡ ತಲೆಯ, ವಿವಿಧ ಬಗೆಯ ಪ್ರಾಣಿಗಳು (ಮುಖ್ಯವಾಗಿ ಕ್ಯಾರೆಟ್‍ ಕ್ಯಾರೆಟ ಕುಲಕ್ಕೆ ಸೇರಿದ ಆಮೆ).
    2. (ಲೇನಿಯಸ್‍ ಲೂಡವಿಷಿಆನಸ್‍ ಕುಲಕ್ಕೆ ಸೇರಿದ) ಕಲಿಂಗ ಪಕ್ಷಿ.
  3. (ಪ್ರಾಚೀನ ಪ್ರಯೋಗ) ಶತದಡ್ಡ; ಯಮದಡ್ಡ; ಶುದ್ಧ – ದಡ್ಡ, ಪೆದ್ದ, ಹೆಡ್ಡ.
  4. ಹಗ್ಗದ – ಗೂಟ, ಕಂಬ; ಸರಿಯುತ್ತಿರುವ ಹಗ್ಗದ ಸುತ್ತನ್ನು ಹಿಡಿದುಕೊಳ್ಳಲು ದೋಣಿಯಲ್ಲಿ ಯಾ ಹಡಗಿನಲ್ಲಿ ನೆಟ್ಟಿರುವ ಗೂಟ, ಕಂಬ.
ಪದಗುಚ್ಛ

we three loggerheads be (ಪ್ರವಾಸಿ ಭೋಜನ ಶಾಲೆಯ ಮುಂದೆ ಲಾಂಛನವಾಗಿ ಎರಡು ಮರದ ತಲೆಗಳನ್ನಿಟ್ಟು ಅವುಗಳ ಕೆಳಗೆ ಬರೆದಿದ್ದ) “ನಾವು ಮೂವರೂ ಶತದಡ್ಡರು” ಎಂಬ ವಾಕ್ಯ (ಅದಕ್ಕೆ ಹೋಗುತ್ತಿರುವವನು ಮೂರನೆಯವನು ಎಂದು ಅರ್ಥ).

ನುಡಿಗಟ್ಟು

at loggerheads (with) (ಒಬ್ಬರ ಮಾತನ್ನೊಬ್ಬರು ಒಪ್ಪದೆ) ಪರಸ್ಪರ – ತಲೆತಲೆ ಹೊಡೆದು ಕೊಳ್ಳುತ್ತ, ಮಾತಿನ ಹಣಾಹಣಿ ನಡೆಸುತ್ತ, ವಾದವಿವಾದ ಮಾಡುತ್ತ.