lofty ಲಾಹ್ಟಿ
ಗುಣವಾಚಕ
  1. (ಸಾಹಿತ್ಯಕ) (ವಸ್ತುಗಳ ವಿಷಯದಲ್ಲಿ) ಬಹಳ ಎತ್ತರವಾದ; ಉತ್ತುಂಗ; ಅತ್ಯುನ್ನತ; ಅತ್ಯುಚ್ಚ: lofty stature ಉನ್ನತ ಗಾತ್ರ. lofty heights ಉತ್ತುಂಗ ಶಿಖರಗಳು.
  2. ಉದಾತ್ತ; ಗಂಭೀರ; ಘನ; ಉಚ್ಚ; ಪ್ರೌಢ; ಉನ್ನತ; ಶ್ರೇಷ್ಠ; ಭವ್ಯ: lofty ideals ಉದಾತ್ತ ಧ್ಯೇಯಗಳು.
  3. (ಪರ್ವತ ಮೊದಲಾದವುಗಳ ವಿಷಯದಲ್ಲಿ) ಮೇಲೇರುತ್ತಾ ಹೋಗುವ: lofty mountain ಮೇಲೇರುತ್ತಾ ಹೋಗುವ ಪರ್ವತ. lofty flight ಮೇಲೆ ಮೇಲೇರುವ ಹಾರಾಟ.
  4. ಗರ್ವಿಷ್ಠ: ಜಂಬದ; ಗರ್ವದ; ದೊಡ್ಡಸ್ತಿಕೆಯ; ಪ್ರತಿಷ್ಠೆಯ; ದುರಹಂಕಾರದ; ಮೇಲರಿಮೆ, ಅಹಂಭಾವ – ತುಂಬಿದ: lofty contempt ಅಹಂಭಾವದಿಂದ ತುಂಬಿದ ತಿರಸ್ಕಾರ. lofty good humour ದೊಡ್ಡಸ್ತಿಕೆಯ ಸುಪ್ರಸನ್ನತೆ.
  5. ಶಬ್ದಾಡಂಬರದ; ವಾಗಾಡಂಬರದ.
  6. ಕೃತಕ ಗಾಂಭೀರ್ಯದ; ಶ್ರೀಮದ್ಗಾಂಭೀರ್ಯದ; ಬಿಂಕದ.